ಮುಂಬೈ:ಅರೆ ಬೆತ್ತಲೆ ಸ್ಥಿತಿಯಲ್ಲಿಯೆ ಮಹಿಳೆ ಶವ ಪತ್ತೆ ಆಗಿದೆ. ಮಹಾರಾಷ್ಟ್ರದ ರಾಯಗಢ ರಸ್ತೆ ಪಕ್ಕದ ಗೋಣಿ ಚೀಲದಲ್ಲಿದ್ದ ಶವವನ್ನ ಕಂಡು ಯುವಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಮೃತ ಮಹಿಳೆಯನ್ನ ಗ್ರಾಮ ಪಂಚಾಯಿತಿಯ ಸರಪಂಚ್ ಎಂದೇ ಗುರುತಿಸಲಾಗಿದೆ. ಮಹಿಳೆಯ ದೇಹದ ಮೇಲೆ ಗಾಯದ ಗುರುತಿಗಳೂ ಇವೆ. ಲೈಂಗಿಕ ದೌರ್ಜನ್ಯದ ಶಂಕೆ ಕೂಡ ಇದೆ.
ಈ ವಿಷಯವನ್ನ ಗ್ರಾಮಸ್ಥರು ಸದ್ಯ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದಾರೆ. ಪರೀಕ್ಷೆ ವರದಿ ಆಧಾರಿಸಿಯೇ ಪೊಲೀಸರು ತನಿಖೆ ಮುಂದುವರೆಸಲಿದ್ದಾರೆ.
PublicNext
28/12/2021 01:18 pm