ಕಾರವಾರ: ಟೋಲ್ ಹಣ ಕಟ್ಟೋ ವಿಚಾರದಲ್ಲಿ ಟೋಲ್ ಗೇಟ್ ಸಿಬ್ಬಂದಿ ಮತ್ತು ಪೊಲೀಸ್‌ರ ನಡುವೆ ಗಲಾಟೆ ಆಗಿದೆ. ಪೊಲೀಸರು ಟೋಲ್ ಸಿಬ್ಬಂದಿ ಮೇಲೆ ಕೈ ಕೂಡ ಮಾಡಿದ್ದಾರೆ. ಈ ಒಂದು ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 66ರ ಹಟ್ಟಿಕೇರಿಯಲ್ಲಿರುವ ಟೋಲ್ ಗೇಟ್ ಬಳಿ ನಡೆದಿದೆ.
ಪೊಲೀಸರು ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದರು. ಬೆಂಗಳೂರಿನಿಂದ ಗೋವಾಕ್ಕೆ ತೆರಳಲು ಎರಡು ಖಾಸಗಿ ವಾಹನವನ್ನೇ ಬಳಸಿದ್ದರು. ಈ ವಾಹನಗಳಿಎ ಪೊಲೀಸ್ ಅಂತಲೂ ಬರೆದುಕೊಂಡಿದ್ದರು. ಆದರೆ ಟೋಲ್ ಹಣ ಕಟ್ಟುವ ವಿಚಾರದಲ್ಲಿ ಟೋಲ್ ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಗಲಾಟೆ ಆಗಿದೆ. ಪೊಲೀಸರು ಟೋಲ್ ಸಿಬ್ಬಂದಿ ಮೇಲೆ ಕೈ ಮಾಡಿದ್ದು ಆಗಿದೆ.
ಈ ಘಟನೆ ಆ ಕ್ಷಣವೇ ಪೊಲೀಸ್ ಠಾಣೆಗೂ ಹೋಯಿತು. ಕೊನೆ ಠಾಣೆಯಲ್ಲಿಯೇ ಈ ಗಲಾಟೆ ಪ್ರಕರಣ ಈಗ ಇತ್ಯರ್ಥ ಆಗಿದೆ.
PublicNext
26/12/2021 01:13 pm