ಬೆಂಗಳೂರು:ಮಲ್ಲತ್ತಹಳ್ಳಿಯಲ್ಲಿ ಅಕ್ರಮ ಗಾಂಜಾ ದಾಸ್ತಾನು ಇಟ್ಟಿದ್ದ ಆರು ಜನ ಆರೋಪಿಗಳನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. 10 ಲಕ್ಷ ಮೌಲ್ಯದ 15 ಕೆಜಿ ಗಾಂಜಾವನ್ನ ಕೂಡ ವಶ ಪಡಿಸಿಕೊಂಡಿದ್ದಾರೆ.
ಚಾಮರಾಜನಗರದಲ್ಲಿ ಮುವರನ್ನ ಮತ್ತು ಬೆಂಗಳೂರಿನಲ್ಲಿ ಮೂವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿಯೇ, ಸಾಫ್ಟ್ ವೇರ್ ಉದ್ಯೋಗಿಗಳಿಗೆ ಮಾರಾಟ ಮಾಡಲೆಂದೇ 15 ಕೆಜಿಯೆಷ್ಟು ಗಾಂಜಾ ದಾಸ್ತಾನು ಇಟ್ಟಿದ್ದರು ಈ ಆರೋಪಿಗಳು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನ ಬಂಧಿಸಿದ್ದಾರೆ.
PublicNext
25/12/2021 11:06 am