ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೆ ಕೊಂದ ಘಟನೆ ಬೆಂಗಳೂರಿನ ಹಲಸೂರು ಠಾಣಾ ವ್ಯಾಪ್ತಿಯ ಎಮ್ ವಿ ಗಾರ್ಡನ್ ನಲ್ಲಿ ನಡೆದಿದೆ.
ಸ್ನೇಹಿತನಿಂದಲೇ ಹತ್ಯೆ ಆದ 18 ರ ಯುವಕನ ಹೆಸರು ವಿನ್ಯುಸ್. ತಡರಾತ್ರಿ ಸ್ನೇಹಿತರ ಜೊತೆಗೆ ಗಾಂಜಾ ಮತ್ತಿನಲ್ಲಿ ಗಲಾಟೆ ಕೂಡ ನಡೆದಿತ್ತು. ಇದೇ ವೇಳೆನೆ ಆಪರೇಷನ್ ಬ್ಲೇಡ್‌ನಿಂದ ಗೆಳೆಯ ಸಂತೋಷ್ ಸಿಟ್ಟಿನಿಂದ ವಿನ್ಯುಸ್ ಕುತ್ತಿಗೆ ಸೀಳಿ ಪರಾರಿ ಆಗಿದ್ದಾನೆ.
ಆದರೆ ತೀವ್ರ ರಕ್ತಸ್ರಾವ ಆಗಿದ್ದರಿಂದಲೇ ವಿನ್ಯುಸ್ ಮೃತಪಟ್ಟಿದ್ದಾನೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಗಲಾಟೆ ಮಾಡಿದ್ದ ಉಳಿದ ಮೂರು ಆರೋಪಿಗಳ ಶೋಧ ನಡೆದಿದೆ.
ಹಲಸೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಈಗ ದಾಖಲಾಗಿದೆ.
PublicNext
25/12/2021 10:20 am