ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಕ್ಷಣೆ ಮಾಡಬೇಕಾದ ಆರಕ್ಷಕನೇ ಖತರ್ನಾಕ್ ಕಳ್ಳ

ಬೆಂಗಳೂರು: ಕಾನೂನು ಕಾಯೋ ಪೊಲೀಸಪ್ಪನೇ ಕಳ್ಳತನದ ರೂವಾರಿಯಾಗಿ ಕಳ್ಳತನ ಮಾಡಿಸಿದ ವಿಚಿತ್ರ ಸ್ಟೋರಿ ಇದು.

ಹೊನ್ನಪ್ಪ @ ರವಿ ಎಂಬ ಕಾನ್ಟೇಬಲ್ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಬೈಕ್ ಕಳ್ಳತನ‌ ಮಾಡಿಸಿ ನಂತರ ಯಾರಿಗೂ ಗೊತ್ತಾಗದಂತೆ ಮಾರುತ್ತಿದ್ದ.ಬೆಂಗಳೂರು ,ಬೆಂಗಳೂರು ಹೊರವಲಯ ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್ ಗಳ ಕಳ್ಳತನ ಮಾಡಿಸಿದ್ದ ಈ ಕಳ್ಳ‌ ಪೊಲೀಸ್ ಈಗ ಮಾಗಡಿ ಪೊಲೀಸ್ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿ ಈವರೆಗೆ ಮಾರಾಟ ಮಾಡಿದ್ದ ೫೩ ಬೈಕ್ ಗಳನ್ನ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ೨೦೧೬ ರ ಬ್ಯಾಚ್ ನ ಸಿವಿಲ್ ಕಾನ್ ಸ್ಟೇಬಲ್ ಆಗಿದ್ದ ಈತ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಕೆಲಸ ನಿರ್ವಹಿಸುತ್ತಿದ್ದ ಹಾಗೂ ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿ ಕರ್ತವ್ಯ ಮಾಡುತ್ತಿದ್ದಾನೆ.

ಹೊನ್ನಪ್ಪ ,ರಾಜಸ್ಥಾನದ ರಮೇಶ್, ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.ಅಪ್ರಾಪ್ತರು ಬೈಕ್ ಕಳ್ಳತನ ಮಾಡಿ ಹೊನ್ನಪ್ಪನಿಗೆ ತಂದು ಕೊಡ್ತಿದ್ರು,ಅದನ್ನು ಮಾರಾಟ ಮಾಡಿ ಐದರಿಂದ ಆರು ಸಾವಿರ ಹಣವನ್ನ ಹುಡುಗರಿಗೆ ತಂದು ಕೊಡುತ್ತಿದ್ದ ಈತ. ಸದ್ಯ ಕಾನ್ ಸ್ಟೇಬಲ್ ನನ್ನ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದು ಮಾಗಡಿ ರೋಡ್ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.

Edited By : Manjunath H D
PublicNext

PublicNext

24/12/2021 01:49 pm

Cinque Terre

52.36 K

Cinque Terre

7

ಸಂಬಂಧಿತ ಸುದ್ದಿ