ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೆಡಿಎಸ್ ಮುಖಂಡನ ಪುತ್ರ ಪ್ರದೀಪ್ ಆತ್ಮಹತ್ಯೆ: ಲೇಡಿ ಪೊಲೀಸ್ ಜತೆಗೆ ವಿವಾಹೇತರ ಸಂಬಂಧದ ಶಂಕೆ

ಮೈಸೂರು:ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಪುತ್ರ ಪ್ರದೀಪ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲೇಡಿ ಸಬ್‌ ಇನ್ಸ್‌ಪೆಕ್ಟರ್ ಹೆಸರೂ ಈ ಒಂದು ಪ್ರಕಣದಲ್ಲಿ ಕೇಳಿ ಬರುತ್ತಿದೆ.

ಸಬ್ ಇನ್ಸ್ಪೆಕ್ಟರ್ ಜೊತೆಗಿನ ವಿವಾಹೇತರ ಪ್ರೇಮ ಸಂಬಂಧದಿಂದಲೇ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಪ್ತವಲಯದಲ್ಲಿ ಗಾಸಿಪ್ ಕೇಳಿ ಬರುತ್ತಿದೆ.

ಮೈಸೂರಿನ ಮರಟ್ಟಿಕ್ಯಾತನಹಳ್ಳಿಯ ಅಪಾರ್ಟಮೆಂಟ್‌ನಲ್ಲಿ ಪ್ರದೀಪ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಇಂದು ಮದುವೆ ಆಗಿರೋ ಸಬ್‌ ಇನ್ಸ್‌ಪೆಕ್ಟರ್ ಜೊತೆಗಿನ ಪ್ರೇಮಪುರಾಣದ ಕಥೆ ಕೇಳಿ ಬರುತ್ತಿದೆ.

ನಿನ್ನೆಯ ದಿನ ಲೇಡಿ ಸಬ್‌ ಇನ್ಸಪೆಕ್ಟರ್ ಹಾಗೂ ಪ್ರದೀಪ್ ಭೇಟಿ ಆಗಿದ್ದರಂತೆ.ಅದ್ಯಾವುದೋ ಕಾರಣಕ್ಕೆ ಜಗಳವೂ ಆಗಿತ್ತಂತೆ. ಇದರಿಂದ ಮನನೊಂದ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಾಗೇನೆ ಲೇಡಿ ಪೊಲೀಸ್ ಗೂ ಮದುವೆ ಆಗಿದೆ.ಮಗು ಇದೆ. ಪ್ರದೀಪ್‌ ಗೂ ಮಕ್ಕಳಿದ್ದಾರೆ.

ಪ್ರದೀಪ್ ತಂದೆ ಶಿವಮೂರ್ತಿ ಬೆಳವಾಡಿ ಅವರು ಮೈಸೂರಿನ ಜಿಲ್ಲಾ ಜೆಡಿಎಸ್‌ನ ಖಜಾಂಚಿ ಆಗಿದ್ದಾರೆ.ಪ್ರದೀಪ್ ತಾಯಿ ಭಾಗ್ಯ ಶಿವಮೂರ್ತಿ ಅವ್ರು ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು. ಆದರೆ ಮಗನ ಅಗಲಿಕೆಯಿಂದ ಇಡೀ ಕುಟುಂಬ ಈಗ ದುಃಖದಲ್ಲಿಯೇ ಇದೆ.

Edited By :
PublicNext

PublicNext

24/12/2021 11:46 am

Cinque Terre

72.97 K

Cinque Terre

6