ನವದೆಹಲಿ: ಚಲಿಸುತ್ತಿರುವ ಆಟೋ ರಿಕ್ಷಾದಿಂದ ಮಹಿಳೆಯೊಬ್ಬರು ಜಿಗಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಸಂವಹನ ತಜ್ಞೆಯಾಗಿ ಕೆಲಸ ಮಾಡುತ್ತಿರುವ ನಿಷ್ಥಾ ಎಂಬವರೇ ಆಟೋದಿಂದ ಜಿಗಿದ ಯುವತಿ. ಕಳೆದ ಭಾನುವಾರ ಮಧ್ಯಾಹ್ನ 12-30ಕ್ಕೆ ಮಾರುಕಟ್ಟೆಯಿಂದ ಮನೆಗೆ ಮರಳುವಾಗ ಆಟೋ ಹತ್ತಿದ ನಿಷ್ಥಾಗೆ ಭಯಾನಕ ಆನುಭವ ಆಗಿದೆ. ಅಡ್ರೆಸ್ ಹೇಳಿ ಆಟೋ ಹತ್ತಿದಾಗ ಆಟೋ ಚಾಲಕ ಜೋರಾದ ಶಬ್ದದೊಂದಿಗೆ ದೇವರ ಹಾಡು ಹಚ್ಚಿದ್ದಾನೆ. ಸೌಂಡ್ ಕಡಿಮೆ ಮಾಡಲು ಹೇಳಿದರೂ ಆತ ಕಡಿಮೆ ಮಾಡಿಲ್ಲ. ನಂತರ ನಿಷ್ಥಾ ಅವರು ತಮ್ಮ ಮನೆಯ ಹಾದಿ ಬಲಕ್ಕೆ ಇದೆ ಎಂದು ಹೇಳಿದರೂ ಆತ ಬಲಕ್ಕೆ ತಿರುಗದೇ ಬೇರೆ ಮಾರ್ಗದಲ್ಲಿ ವೇಗವಾಗಿ ಆಟೋ ಚಲಾಯಿಸಿದ್ದಾನೆ.
ಇದರಿಂದ ಭೀತಿಗೊಂಡ ನಿಷ್ಥಾ ಅವರು ಎಷ್ಟೇ ಪರಿಪರಿಯಾಗಿ ಕೇಳಿದರೂ ಆಟೋ ಚಾಲಕ ಉತ್ತರಿಸದೆ ಜೋರಾಗಿ ದೇವರ ಹೆಸರನ್ನು ಕೂಗಿದ್ದಾನೆ. ಹೀಗಾಗಿ "ಕಳೆದುಹೋಗುವುದಕ್ಕಿಂತ ಮುರಿದ ಮೂಳೆಗಳು ಉತ್ತಮ" ಎಂದುಕೊಂಡು ನಾನು ಆಟೋದಿಂದ ಜಿಗಿದುಬಿಟ್ಟೆ. ಸ್ವಲ್ಪ ಸಣ್ಣ-ಪುಟ್ಟ ಗಾಯಗಳಾದರೂ ಸಾವರಿಸಿಕೊಂಡು ಮನೆ ಸೇರಿಕೊಂಡಿದ್ದೇನೆ ಎಂದು ನಿಷ್ಥಾ ಅವರು ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಘಟನೆಯಲ್ಲಿ ತಪ್ಪಿಸಿಕೊಳ್ಳುವ ಧಾವಂತದಲ್ಲಿದ್ದ ನಾನು ಆಟೋ ನಂಬರ್ ದಾಖಲಿಸಿಕೊಳ್ಳಲಿಲ್ಲ. ಆ ಬಗ್ಗೆ ನನಗೆ ಪಶ್ಚಾತ್ತಾಪ ಇದೆ ಎಂದು ಕೂಡ ನಿಷ್ಥಾ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
PublicNext
22/12/2021 08:01 pm