ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಲ್ಲನಿಗಾಗಿ ನಡುರಸ್ತೆಯಲ್ಲಿ ಫುಲ್ ಫೈಟಿಂಗ್: ಆಕೆಗೂ ಈಕೆಗೂ ಅವನೇ ಬೇಕು

ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ತ್ರಿಕೋನ ಪ್ರೇಮಕತೆಗಳು ಬಹುಶಃ ಇದೇ ರೀತಿ ಕೊನೆಯಾಗುತ್ತವೇನೋ ಅನಿಸುತ್ತೆ‌. ಈ ಇಬ್ಬರೂ ಹುಡುಗಿಯರು ಒಬ್ಬನನ್ನೇ ಲವ್ ಮಾಡ್ತಿದ್ರು‌. ಇದರಿಂದಾಗಿ ಇಬ್ಬರ ನಡುವೆ ಅಸಹನೆ ತಾರಕಕ್ಕೇರಿತ್ತು. ಅದರ ಪರಿಣಾಮ ಅಚಾನಕ್ಕಾಗಿ ಪರಸ್ಪರ ಎದುರಾದ ಹುಡುಗಿರಿಯರು ನಲ್ಲನಿಗಾಗಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡಿದ್ದಾರೆ.

ಈ ಘಟನೆ ನಡೆದಿದ್ದು ಆಂಧ್ರ ಪ್ರದೇಶದ ವಿಶಾಖಪಟ್ಟಣಂ ‌ನಗರದಲ್ಲಿ. ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಈ ಇಬ್ಬರೂ ವಿದ್ಯಾರ್ಥಿನಿಯರು ಬೆಳಿಗ್ಗೆ ಕಾಲೇಜಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಇದನ್ನು ಗಮನಿಸಿಕೊಂಡ ಪರಸ್ಪರರು ನಿಂದಿಸಿಕೊಳ್ಳಲು ಶುರು ಮಾಡಿದ್ದಾರೆ. ಇವರ ಕೂಗಾಟ ಕೇಳಿ ಸುತ್ತಲಿನ ಜನ ಜಮಾಯಿಸಿದ್ದಾರೆ. ಮಾತಿಗೆ ಮಾತು ಬೆಳೆಸಿದ ಹುಡುಗಿಯರು ಸ್ಥಳದಲ್ಲೇ ಕೈ-ಕೈ ಮಿಲಾಯಿಸಿದ್ದಾರೆ. ಜುಟ್ಟು ಹಿಡಿದು ಒಬ್ಬರನ್ನೊಬ್ಬರು ತಳ್ಳಾಡಿ ನೂಕಾಡಿದ್ದಾರೆ‌. ಈ ಜಗಳಕ್ಕೆ ಕಾರಣವೇನೆಂದು ತಿಳಿದ ಸುತ್ತಲಿದ್ದವರು ದಂಗಾಗಿದ್ದಾರೆ. ಈ ವೇಳೆ ಈ ಯುವತಿಯರು ಪ್ರೀತಿಸುತ್ತಿದ್ದ ಆ ಯುವಕನೂ ಸ್ಥಳದಲ್ಲಿದ್ದ.

ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನೂ ಠಾಣೆಗೆ ಕರೆದೊಯ್ದು ಸಮಾಲೋಚನೆ ನಡೆಸಿ ಬುದ್ಧಿ ಹೇಳಿ ಕಳುಹಿಸಿದ್ದಾರೆ.

Edited By : Manjunath H D
PublicNext

PublicNext

22/12/2021 06:24 pm

Cinque Terre

92.09 K

Cinque Terre

13