ಹಾಸನ: ಮದುವೆ ಆಗಿ ಕೇವಲ ಎರಡು ವಾರ ಆಗಿತ್ತಷ್ಟೇ. ಆಕೆಯ ಕೈಯಲ್ಲಿನ ಮೆಹಂದಿ ಇನ್ನೂ ಮಾಸಿರಲಿಲ್ಲ. ಅದಾಗಲೇ ಮಗಳು ಹೆಣವಾಗಿದ್ದಾಳೆ. ಇದು ಗಂಡನ ಮನೆಯವರೇ ಮಾಡಿದ ಕೊಲೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಹಾಸನ ನಗರದಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಫಿಜಾ ಖಾನಂ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಕೇವಲ 19 ದಿನಗಳ ಹಿಂದೆ ಫಿಜಾ ಖಾನಂ ಮದುವೆ ಹಾಸನದ ಸಲೀಂ ನಗರದ ನಿವಾಸಿ ಶಾಗಿಲ್ ಅಹಮದ್ ಜೊತೆ ನಡೆದಿತ್ತು. ಫಿಜಾ ಖಾನಂ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊಳಲಗೋಡು ಗ್ರಾಮದವರು. ಡಿಸೆಂಬರ್ 2ರಂದು ಫಿಜಾ ಮತ್ತು ಶಾಗಿಲ್ ಮದುವೆ ನಡೆದಿತ್ತು.
ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಫಿಜಾ ಖಾನಂ ಪೋಷಕರು ಆರೋಪ ಮಾಡಿದ್ದಾರೆ.
ಅಳಿಯ ಶಾಗಿಲ್ ಅಹಮದ್, ಸಹೋದರರು, ಶಾಗಿಲ್ ತಾಯಿ ವಿರುದ್ಧ ಪ್ರಕರಣ ದಾಖಲು ಆಗಿದೆ. ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಮತ್ತು ಅನುಮಾನಾಸ್ಪದ ಸಾವು ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಾಸನದ ಪೆನ್ಸನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
22/12/2021 12:19 pm