ಗೋಪಾಲ್ ಗಂಜ್ (ಬಿಹಾರ) : ಬಿಹಾರದ ಗೋಪಾಲ್ ಗಂಜ್ ನಲ್ಲಿ ಒನ್ ಸೈಡ್ ಲವ್ ಪುಂಡನೊಬ್ಬ 8 ನೇ ತರಗತಿ ವಿದ್ಯಾರ್ಥಿನಿಗೆ 10 ಬಾರಿ ಚಾಕುವಿನಿಂದ ಇರಿದಿದ್ದಾನೆ.
ಹೌದು ಈ ವಿದ್ಯಾರ್ಥಿನಿಗೆ ನನ್ನನ್ನು ಪ್ರೀತಿಸು ಪ್ರೀತಿಸು ಎಂದು ಪೀಡಿಸುತ್ತಿದ್ದ ಪುಂಡ ಡಿ.20 ರಂದು ವಿದ್ಯಾರ್ಥಿನಿ ಶಾಲೆಯಿಂದ ಆಕೆಯ ಸ್ನೇಹಿತರ ಜೊತೆ ಬರುವುದನ್ನು ಗಮನಿಸಿ ಏಕಾಏಕಿ ಅವಳ ಮೇಲೆ ದಾಳಿ ಮಾಡಿದ್ದಾನೆ. ಇನ್ನು ದಾಳಿಯ ಭಯಾನಕ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಮಂಜಗಢ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಾಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಗಾಯಗೊಂಡ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗೋರಖ್ ಪುರ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಶಿಫ್ಟ್ ಮಾಡಲಾಗಿದೆ.
ಇನ್ನು ಈ ದುಷ್ಕೃತ್ಯ ನಡೆಯುತ್ತಿದ್ದಂತೆ ಗಾಯಗೊಂಡ ವಿದ್ಯಾರ್ಥಿಯ ಸ್ನೇಹಿತರು ಆಕೆಯ ಮನೆಗೆ ಬಂದು ವಿಷಯ ತಿಳಿಸಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
PublicNext
21/12/2021 07:43 pm