ರಾಮನಗರ: ನೀನಿನ್ನೂ ಎಸ್ಸೆಸ್ಸೆಲ್ಸಿ ಓದುವ ಹುಡುಗಿ ಕಣಮ್ಮ. ಈ ಲವ್ವು-ಗಿವ್ವು ಎಲ್ಲ ನಿನಗೆ ಬೇಡ ಎಂದರೂ ನನಗೆ ಅವನೇ ಬೇಕು ಎನ್ನುತ್ತಿದ್ದ ಮಗಳು ಈಗ ದುರಂತ ಅಂತ್ಯ ಕಂಡಿದ್ದಾಳೆ.
ರಾಮನಗರದ ಹೊರವಲಯದ ರಾಮದೇವರಬೆಟ್ಟದಲ್ಲಿ ನಿನ್ನೆ ಸೋಮವಾರ ಜೋಡಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಬಂದು ಪರಿಶೀಲಿಸಿದಾಗ ಇದು ರಾಮನಗರ ತಾಲೂಕಿನ ಸುಗ್ಗರಹಳ್ಳಿಯ 16 ವರ್ಷ ವಯಸ್ಸಿನ ಕಾವ್ಯ ಹಾಗೂ ದೇವರಸೇಗೌಡನದೊಡ್ಡಿಯ 26 ವರ್ಷದ ಹರೀಶ್ ಎಂದು ತಿಳಿದುಬಂದಿದೆ.
ವೃತ್ತಿಯಲ್ಲಿ ಕಾರ್ ಚಾಲಕನಾಗಿರುವ ಹರೀಶ್, ಕಳೆದ ಕೆಲವು ದಿನಗಳಿಂದ ಕಾವ್ಯಾಳನ್ನು ಪ್ರೀತಿ ಮಾಡ್ತಿದ್ದ. ಈ ವಿಷಯವನ್ನು ಕಾವ್ಯಾ ತನ್ನ ಪೋಷಕರಿಗೆ ಹೇಳಿದಾಗ ಅವರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿ, ನೀನಿನ್ನೂ ಚಿಕ್ಕವಳು ಓದಿನ ಕಡೆ ಗಮನಹರಿಸು ಎಂದು ಬುದ್ಧಿ ಹೇಳಿದ್ದಾರೆ.
ಇದೇ ಕಾರಣಕ್ಕೆ ಮನನೊಂದ ಕಾವ್ಯಾ ತನ್ನ ಪ್ರಿಯಕರ ಹರೀಶ್‌ನೊಂದಿಗೆ ರಾಮದೇವರಬೆಟ್ಟಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/12/2021 03:49 pm