ಬೆಂಗಳೂರು:ಅಣ್ಣ ಬುದ್ಧಿ ಹೇಳಿದ ಅಂತಲೇ ತಮ್ಮ ಪಿಸ್ತೂಲ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ಆದರೆ ಹೀಗೆ ಆತ್ಮಹತ್ಯೆಗೆ ಪ್ರಯತ್ನಿಸಿದ ಸಲ್ಮಾನ್ ಅನ್ನೋ ಯುವಕ ಗುರಪ್ಪನಪಾಳ್ಯದ ವಾರ್ಡ್ ನಂಬರ್-170ರ ಮಾಜಿ ಕಾರ್ಪೊರೇಟರ್ ಕೆ.ಎಸ್.ಸಮೀವುಲ್ಲಾರ ಮಗ ಎಂದು ಈಗ ಗೊತ್ತಾಗಿದೆ.
ಅಣ್ಣ ಸೋನಾಮಿಹಾದ್ ಹಾಗು ಸಲ್ಮಾನ್ ಸದಾ ಗಲಾಟೆ ಮಾಡಿಕೊಳ್ಳುತ್ತಿದ್ದರಂತೆ. ಸಲ್ಮಾನ್ ಗೆ ಅಣ್ಣ ಸದಾ ಮೆಂಟಲ್ ಅನ್ನುತ್ತಿದ್ದನಂತೆ.ಅದೇ ರೀತಿ ನಿನ್ನೆ ತಡರಾತ್ರಿ ಮನೆಗೆ ಬಂದಾಗ ಮತ್ತದೇ ರೀತಿ ಮೆಂಟಲ್ ಅಂದ್ನತೆ ಅಣ್ಣ. ಅದಕ್ಕೇನೆ ಇದರಿಂದ ಸಿಟ್ಟಾದ ಸಲ್ಮಾನ್ ಅಣ್ಣನ ಕೈಯಲ್ಲಿದ್ದ ಪಿಸ್ತೂಲ್ ಹಿಡಿದು ತಲೆಗೆ ಗುಂಡು ಹಾರಿಸಿಕೊಳ್ಳೋಕೆ ಮುಂದಾಗಿದ್ದ.
ಆದರೆ ಸ್ನೇಹಿತ ಫೈಜಲ್ ಪಿಸ್ತೂಲ್‌ನ್ನ ಸಲ್ಮಾನ್ ಕೈಯಿಂದ ಬೇರೆಡೆ ತಿರುಗಿಸಿದ್ದ.ಆಗಲೇ ಫೈಜನಲ್ ಬಲಗೈಗೆ ಗುಂಡು ಹೊಕ್ಕು ಗಂಭೀರ ಗಾಯವಾಗಿದೆ. ಆರ್ಮ್ಸ್ ಆಕ್ಟ್ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಲ್ಮಾನ್‌ನನ್ನ ಬಂಧಿಸಿದ್ದಾರೆ.
PublicNext
21/12/2021 07:54 am