ಹಾವೇರಿ: ಖಾಕಿ ಕಂಡರೇ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಭಯ. ಆದರೆ ಆ ಭಯದಲ್ಲಿ ಒಂದು ನಂಬಿಕೆ ಹಾಗೂ ಗೌರವ ಇರುತ್ತದೆ. ಅಲ್ಲದೆ ಕರ್ನಾಟಕ ಪೊಲೀಸ್ ಅಂದರೆ ನಿಜಕ್ಕೂ ಒಂದು ಗತ್ತು ಗಾಂಭಿರ್ಯತೆ ಇದ್ದೆ ಇದೆ. ಇಲ್ಲೊಬ್ಬ ಪೊಲೀಸ್ ಅಧಿಕಾರಿಯ ವರ್ತನೆಯಿಂದ ಖಾಕಿ ಮೇಲಿನ ನಂಬಿಕೆ ಕೂಡ ಕಳೆದು ಹೋಗಿದೆ. ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ತೋರಸ್ತೀವಿ ನೋಡಿ...
ಹೀಗೆ ಮಹಿಳೆಯೊಬ್ಬರಿಗೆ ಮಧ್ಯರಾತ್ರಿಯಲ್ಲಿ ವಿಡಿಯೋ ಕಾಲಿಂಗ್ ಮಾಡಿ ತೊಂದರೆ ಕೊಡುತ್ತಿರುವ ಈ ವ್ಯಕ್ತಿ ಗೌರವಯುತ ಸರ್ಕಾರಿ ನೌಕರ. ಅಲ್ಲದೇ ಎಲ್ಲರಿಗೂ ರಕ್ಷಣೆ ನೀಡುವ ಆರಕ್ಷಕ ಹುದ್ದೆಯಲ್ಲಿ ಉನ್ನತ ಸ್ಥಾನದಲ್ಲಿರುವ ಈ ಪೊಲೀಸಪ್ಪ ತನ್ನ ಚಪಲಕ್ಕೆ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾನೆ. ಹೌದು.. ಮಹಿಳೆಯರಿಗೆ ರಕ್ಷಣೆ ನೀಡಬೇಕಿದ್ದ ಸಿಪಿಐ ದೂರು ನೀಡಲು ಬಂದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಜೊತೆಗೆ ವಿಡಿಯೋ ಕಾಲಿಂಗ್ ಮಾಡಿ ಬಟ್ಟೆ ಬಿಚ್ಚಲು ಹಾಗೂ ಮಂಚಕ್ಕೆ ಕರೆಯುವ ಮೂಲಕ ಮಹಿಳೆಯರಿಗೆ ಟಾರ್ಚರ್ ಮಾಡಿದ್ದಾನೆ.
ಈಗ ಮಾಡಿದ್ದು ಉಣ್ಣೋ ಮಹಾರಾಯ ಎಂಬುವಂತ ಮಾಡಿದ ತಪ್ಪಿಗೆ ಅಮಾನತ್ತಾಗಿದ್ದಾನೆ. ಕರ್ತವ್ಯ ಲೋಪ ಮತ್ತು ಅಶಿಸ್ತು ಪ್ರದರ್ಶನ ಮಾಡಿದ್ದಕ್ಕೆ ಸಿಪಿಐ ಅನ್ನು ಅಮಾನತ್ತು ಮಾಡಿ ಐಜಿ ಆದೇಶ ಹೊರಡಿಸಿದ್ದಾರೆ.
ಮಹಿಳಾ ಠಾಣೆತ ವೃತ್ತ ನಿರೀಕ್ಷಕ ಚಿದಾನಂದ ಎಂಬುವವನೇ ಇಂತಹ ಕೆಲಸವನ್ನು ಮಾಡಿ ಕೆಲಸದಿಂದ ಸಸ್ಪೆಂಡ್ ಆಗಿದ್ದಾನೆ.
ಹಾವೇರಿ ಮಹಿಳಾ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇತನ ಮೇಲೆ ಹಲವು ದೂರುಗಳ ಬಂದ ಹಿನ್ನಲೆ ದಾವಣಗೆರೆ ಪೂರ್ವವಲಯದ ಪೋಲಿಸ್ ಮಹಾ ನಿರೀಕ್ಷರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನೂ ದಾವಣಗೇರಿ ಐಜಿ ಕಚೇರಿಗೆ ಎಸ್ಪಿ ಹನುಮಂತರಾಯ್ ಶಿಪಾರಸ್ಸು ಮಾಡಿದ್ದಾರೆ.
PublicNext
20/12/2021 08:09 am