ವರದಿ: ಈರಣ್ಣ ವಾಲಿಕಾರ
ಗೋಕಾಕ: ಆಕೆ ಮದ್ವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿದ್ಲು. ಆದರೆ ಪ್ರೀತಿಸಿದವನನ್ನು ನಂಬಿ ಗಂಡನಿಗೆ ಮೋಸ ಮಾಡಿ ಪ್ರೀತಿಸಿದವನ ಜೊತೆಗೆ ಪ್ರೀತಿ.. ಪ್ರೇಮ...ಮದುವೆ ಆಗಿ. ಕೊನೆಗೆ ನಂಬಿಸಿವ ಚಟ ತೀರಿದ ಮೇಲೆ ಹೊಸ ರಾಗ ತೆಗೆದ.. ಎಂಬಂತೆ ಮೋಸದ ಪ್ರೀತಿಯನ್ನೇ ನಿಜ ಅಂತ ನಂಬಿದ ಅಮಾಯಕ ಯುವತಿಯೊಬ್ಬಳು ದಿಕ್ಕೆ ತೋಚದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದಾಳೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ...
ಮದುವೆ ಆಗುತ್ತೆನೆಂದು ಹೇಳಿ ಮೋಸ ಮಾಡಿದ ಪ್ರಿಯಕರನ ಮನೆ ಮುಂದೆ ಕುಳಿತುಕೊಂಡಿರುವ ಈಕೆಯ ಹೆಸರು ಗೀತಾ. ಮೂಲತಃ ಗೋಕಾಕ ತಾಲೂಕಿನ ಅರಭಾಂವಿಯವಳು. ಗೀತಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ಕೈಹಿಡದ ಗಂಡನಿಗೆ ಮೋಸ ಮಾಡಿದಳು. ಈ ಅಕ್ರಮ ಸಂಬಂಧ ವಿಷಯ ಗೊತ್ತಾದ ಗೀತಾಳ ಗಂಡ ಡಿವೋರ್ಸ್ ನೀಡಿದ್ದಾನೆ. ಆಗ ಪ್ರೀಯಕರ ಮೌನೇಶ ಬಡಿಗೇರ ಎಂಬಾತನೊಂದಿಗೆ ಮೂರು ತಿಂಗಳ ಹಿಂದೆ ಬೈಲಹೊಂಗಲದ ಸೊಗಲದಲ್ಲಿ ಮದುವೆಯಾಗಿದ್ದಾಳೆ.ಆದರೆ ಕೆಲವು ದಿನಗಳ ನಂತರ ಮೌನೇಶ ಮನೆಯವರ ಮಾತು ಕೇಳಿ ಗೀತಾಳ ಜಾತಿ ನೆಪವೊಡ್ಡಿ ಗೀತಾ ಬರುವಿಕೆ ನೋಡಿ, ಮೌನೇಶ ಇತ್ತ ತನ್ನ ಮನೆ ಬಾಗಿಲು ಬಂದ್ ಮಾಡಿ ಪರಾರಿಯಾಗಿದ್ದಾನೆ.
ಇನ್ನು ಗೀತಾ ಎಲ್ಲಿಯವರೆಗೆ ತನ್ನ ಪ್ರೀಯಕರ ಬರೋದಿಲ್ಲವೋ ಅಲ್ಲಿಯವರೆಗೆ ಈ ಮನೆ ಬಿಟ್ಟು ಹೋಗುವುದಿಲ್ಲ, ಸತ್ತರು ಸಹ ಈ ಮನೆಯ ಮುಂದೆ ಅಂತಾ ಹೇಳುತಿದ್ದಾಳೆ. ಒಟ್ಟಾರೆಯಾಗಿ ಗೀತಾಳ ಬದುಕು ಇತ್ತ ಮದುವೆಯಾದ ಗಂಡನು ಹೋದ , ಪ್ರೀಯಕರ ಕೂಡ ನಾಪತ್ತೆಯಾಗಿದ್ದು, ಗೀತಾಳ ಗತಿ ಏನಾಗಬಹುದು ಎಂದು ಕಾದು ನೋಡಬೇಕಾಗಿದೆ.
PublicNext
19/12/2021 01:01 pm