ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಮಾಂಸದೂಟ ಉಂಡು, ಹುಂಡಿಯನ್ನೇ ಕದ್ದೊಯ್ದರು!

ದೊಡ್ಡಬಳ್ಳಾಪುರ: ದೇವರ ಪೂಜಾ ಕೈಂಕರ್ಯದಲ್ಲಿ ಮಾಡಿದ್ದ ಮಾಂಸದೂಟ ಸವಿದ ಬಳಿಕ ಖದೀಮರಿಬ್ಬರು ದೇವರ ಹುಂಡಿಯನ್ನೇ ಕದ್ದೊಯ್ದ ಘಟನೆ ತಾಲೂಕಿನ ಕೆಳಗಿನಜೂಗಾನಹಳ್ಳಿಯಲ್ಲಿ ನಡೆದಿದೆ!

ದೇವರ ಹುಂಡಿ ಕಳವಾದ ಬಗ್ಗೆ ಆತಂಕಗೊಂಡ ಗ್ರಾಮಸ್ಥರು, ಊಟಕ್ಕೆ ಬಂದಿದ್ದ ಇಬ್ಬರ ಮೇಲೆ ಅನುಮಾನ ಪಟ್ಟು, ಈ ಪೈಕಿ ಒಬ್ಬನನ್ನು ವಿಚಾರಿಸಿದಾಗ ಹುಂಡಿ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾನೆ.  ಗೆದ್ದಲಪಾಳ್ಯ ನಿವಾಸಿ ಮುನಿರಾಜು ಸಿಕ್ಕಿಬಿದ್ದ ಆರೋಪಿಯಾಗಿದ್ದು, ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಗ್ರಾಮ ದೇವತೆಯರಾದ ಮದ್ದೂರಮ್ಮ ಹಾಗೂ ಮಹೇಶ್ವರಮ್ಮಗೆ ಹೊಸದಾಗಿ ದೇವಸ್ಥಾನ ಕಟ್ಟಿಸಲಾಗಿದ್ದು, ಗುರುವಾರ ಪ್ರತಿಷ್ಠಾಪನೆ ಮಾಡಲಾಗಿತ್ತು. ಶುಕ್ರವಾರ ದೇವರ ಕಾರ್ಯಕ್ಕೆಂದೇ ಹರಕೆಯ ಮಾಂಸದೂಟ ಮಾಡಿಸಲಾಗಿತ್ತು. ಊಟಕ್ಕೆ ಗೆದ್ದಲಪಾಳ್ಯದ ಮುನಿರಾಜು ಹಾಗೂ ಗಂಗಾಧರ್‌ ಬಂದಿದ್ದರು.

ಹಿಂದಿನಿಂದಲೂ ಪಾಲಿಸುತ್ತಾ ಬಂದ ಕ್ರಮದಂತೆ ದೇವರ ಹರಕೆ ಮಾಂಸದೂಟ ಮಾಡಿಸಿದ ಬಳಿಕ ಆ ದಿನ ರಾತ್ರಿ ಯಾರೂ ದೇವಾಲಯದ ಹತ್ತಿರ ಇರುವುದಿಲ್ಲ. ಹೀಗಾಗಿ ಗ್ರಾಮಸ್ಥರು ಶುಕ್ರವಾರ ರಾತ್ರಿ ಯಾರೂ ಉಳಿದು ಕೊಂಡಿರಲಿಲ್ಲ. ಶನಿವಾರ ಬೆಳಿಗ್ಗೆ ದೇವಾಲಯಕ್ಕೆ ಹೋದಾಗ ಹುಂಡಿ ಕಳವಾಗಿರುವುದು ಗೊತ್ತಾಗಿತ್ತು.

"ಮುನಿರಾಜು ಹಾಗೂ ಗಂಗಾಧರ್‌ ಕಳ್ಳತನ ಕೇಸ್‌ಗಳಲ್ಲಿ ಈ ಹಿಂದೆ ಇದ್ದ ಸಂಗತಿ ಗೊತ್ತಾಗಿತ್ತು. ಹೀಗಾಗಿ ಅವರ ಊರಿಗೆ ತೆರಳಿ ವಿಚಾರಿಸಿದೆವು. ಆದರೆ, ಗಂಗಾಧರ್‌ ಸಿಗಲಿಲ್ಲ. ಮುನಿರಾಜು ಮನೆಗೆ ಹೋಗಿ, ಶೋಧಿಸಿದಾಗ  ಗಂಟಿನಲ್ಲಿ ಕಟ್ಟಿದ್ದ ಹಣ ಸಿಕ್ಕಿದ್ದು ಅದು ಹುಂಡಿ ಹಣವೇ ಆಗಿತ್ತು. ಅದಲ್ಲದೆ, ಹುಂಡಿ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ" ಎಂದು ಗ್ರಾಮಸ್ಥ ಗೋಪಾಲ್‌ ತಿಳಿಸಿದರು.

Edited By : Manjunath H D
PublicNext

PublicNext

19/12/2021 12:12 pm

Cinque Terre

58 K

Cinque Terre

5

ಸಂಬಂಧಿತ ಸುದ್ದಿ