ಯಲಹಂಕ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇವರಿಬ್ಬರು ಫೆಬ್ರವರಿ 2022ರಲ್ಲಿ ಮದುವೆ ಆಗ್ತಿದ್ದರು. ಈ ಯುವತಿ ಹೆಸರು ಗಂಗಾ(34), ಉಡುಪಿ ಮೂಲದ ಈಕೆ ಬೆಂಗಳೂರಿನ ಸಹಕಾರ ನಗರದ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಇನ್ನು ಈ ಆಸಾಮಿ ಹೆಸರು ಶ್ಯಾಮ್ . ಕಾರವಾರದ ದಾಂಡೇಲಿಯವ. ಶ್ಯಾಮು ಗಡ್ಡ ಬಿಟ್ಕೊಂಡು, ಯೋಗ ಮಾಡ್ಕೊಂಡು ಇಬ್ಬರು ಒಟ್ಟಿಗೆ 3 ವರ್ಷಗಳಿಂದ ಲೀವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿ ವಾಸವಾಗಿದ್ದರು.
ಎರಡೂ ಮನೆಗಳಲ್ಲಿ ಒಪ್ಪಿಸಿ ಫೆಬ್ರವರಿಯಲ್ಲಿ ಮದುವೆಗೆ ತಯಾರಿ ನಡೆಸಿದ್ದರು. ಅದೇನಾಯ್ತೊ ಬುಧವಾರ ರಾತ್ರಿ ನಡೆದ ಮಾತಿನ ಚಕಮಕಿಯಲ್ಲಿ ಗಂಗಾಳ ತಲೆಗೆ ಶ್ಯಾಮ್ ಪ್ರತಿಮೆಯಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ! ಬಳಿಕ ಗಾಬರಿಯಾಗಿ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ, ಆಸ್ಪತ್ರೆಯಲ್ಲಿ ಡ್ರಾಮಾ ಮಾಡಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಅಪ್ಪ- ಅಮ್ಮ ನೋಡಿ ವಿಚಾರಿಸಿ ಮಾಡುವ ಮದುವೆಗಳೇ ಗಟ್ಟಿಯಾಗಿ ನಿಲ್ಲದ ಈ ಕಾಲದಲ್ಲಿ, ಲೀವಿಂಗ್ ಟುಗೆದರ್... ನಿಲ್ಲುತ್ತವಾ? ಯೋಗ ಕಲಿಯಲು ಹೋದ ವಿದ್ಯಾರ್ಥಿ ಗಂಗಾ ತನಗಿಂತ 6 ವರ್ಷ ಚಿಕ್ಕವನಾದ ಶ್ಯಾಮ್ ನನ್ನು ಮದುವೆಯಾಗಲು ನಿರ್ಧರಿಸಿ, ಇದೀಗ ಕೊಲೆಯಾಗಿದ್ದಾಳೆ.
ಪ್ರೇಮ- ಪ್ರಣಯ ಸಂದರ್ಭ ಪಡೆದ 1 ಲಕ್ಷ ರೂ. ವಾಪಸ್ ಕೇಳಿದ್ದು ಕೊಲೆಗೆ ಕಾರಣವಾಯ್ತಾ? ಎರಡೂ ಮನೆಯವರು ಮದುವೆಗೆ ಒಪ್ಪಿದ್ದರು ಎನ್ನಲಾಗಿದ್ದು, ಗಂಗಾ ಅತಿ ಹೆಚ್ಚಾಗಿ ಶ್ಯಾಮ್ ನನ್ನು ನಿಯಂತ್ರಣ ಮಾಡ್ತಿದ್ದ ಪೊಸೆಸಿವ್ನೆಸ್ ಕೊಲೆಗೆ ಕಾರಣವಾಯ್ತಾ..!? ಅಥವಾ ಶ್ಯಾಮ್ ಗೆ ಗಂಗಾಳ ಸಹವಾಸ ಸಾಕೆನಿಸಿತ್ತಾ..!!?
PublicNext
18/12/2021 09:08 am