ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಾಪಾರದ ಸೋಗಿನಲ್ಲಿ ಬಂದು ದರೋಡೆ-6 ಜನರನ್ನ ಬಂಧಿಸಿದ ಪೊಲೀಸರು

ಬೆಂಗಳೂರು:ವ್ಯಾಪಾರ ಮಾಡುವ ಸೋಗಿನಲ್ಲಿ ಬಂದು ದರೋಡೆ ಮಾಡಿದ್ದ 6 ಜನ ದರೋಡೆಕೋರರನ್ನ ಬೆಂಗಳೂರು ಪೊಲೀಸರು ಬಂದಿದ್ದಾರೆ.

ಬಂಧಿತರನ್ನ ಅನಿತಾ, ದೀಪಾ, ವಿಜಯ್, ನವೀನ್, ಮಹಾಲಿಂಗಯ್ಯ, ಚಂದ್ರಶೇಖರ್ ಗುರುತಿಸಲಾಗಿದೆ.ಇವರಿಂದ 9.50 ಲಕ್ಷ ಬೆಲೆಬಾಳುವ ಚಿನ್ನಾಭರಣ, ಒಂದು ಬೈಕ್, 63 ಸಾವಿರ ನಗದು, ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.

ಬಟ್ಟೆ ಮತ್ತು ಕಾಸ್ಮೆಟಿಕ್ ವ್ಯಾಪಾರ ಮಾಡುತ್ತಿದ್ದ ಬಸವೇಶ್ವರ ನಗರ ನಿವಾಸಿಯನ್ನೇ ಈ ಆರು ಜನ ದರೋಡೆ ಮಾಡಿದ್ದರು.ವ್ಯಾಪಾರದ ಸೋಗಲ್ಲಿ ಮನೆಗೆ ಹೋಗಿ ಬೆದರಿಕೆ ಹಾಕಿದ್ದರು. ಮನೆಯಲ್ಲಿ ವೇಶ್ಯಾವಾಟಿಕೆ ಮಾಡ್ತಾ ಇದ್ದೀರಾ.ಪೊಲೀಸರು ಸಹ ಬರ್ತಾರೆ, ಐದು ಲಕ್ಷ ಹಣ ನೀಡುವಂತೆ ಹೆದರಿಸಿದ್ದರು.

ಆದರೆ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಈ ಆರು ಜನ ಪರಾರಿ ಆಗಿದ್ದರು.

ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

14/12/2021 10:56 pm

Cinque Terre

35.48 K

Cinque Terre

0

ಸಂಬಂಧಿತ ಸುದ್ದಿ