ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೀರದ ವರದಕ್ಷಿಣೆ ದಾಹ-ಪತ್ನಿಯನ್ನೆ ಕೊಂದ ಪತಿರಾಯ

ಚಾಮರಾಜನಗರ: ವರದಕ್ಷಿಣಿಗಾಗಿಯೇ ಪತ್ನಿಗೆ ಹಿಂಸೆ ನೀಡಿ ನೇಣು ಬಿಗಿದು ಕೊಂದ ಘಟನೆ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ.

ದಿವ್ಯಾ ಅನ್ನೋ 22 ವರ್ಷದ ಯುವತಿನೇ ಮೃತ ದುರ್ದೈವಿ. ದಿವ್ಯಾ ಪತಿ ಜಯಶಂಕರ್,ಮಾವ ಸಿದ್ದಮಲ್ಲಪ್ಪ,ಅತ್ತೆ ಸುಂದ್ರಮ್ಮ,ಬಾವ ಚಂದ್ರಶೇಖರ್ ಹಾಗೂ ವಾರಗಿತ್ತಿ ಇವರೆಲ್ಲ ಘಟನೆ ಬಳಿಕ ಪರಾರಿ ಆಗಿದ್ದಾರೆ.

ಕಳೆದ 9 ತಿಂಗಳ ಹಿಂದೆ ಮದುವೆ ಆಗಿತ್ತು. ಚಿನ್ನಾಭರಣ ಮತ್ತು 2 ಲಕ್ಷ ದುಡ್ಡುನ್ನೂ ಕೊಟ್ಟು ತಾಲೂಕಿನ ಕೊತ್ತಲವಾಡಿ ಗ್ರಾಮದ ದೇವಪ್ಪ ಮಗಳು ದಿವ್ಯಾಳ ಮದುವೆ ಮಾಡಿದ್ದರು.

ಆದರೆ ಅಳಿಯನ ಮನೆಯವರ ವರದಕ್ಷಿಣ ದಾಹ ತೀರದೇ ಮಗಳನ್ನ ಕೊಂದಿದ್ದಾರೆ. ಮನೆ ಪಕ್ಕದ ಕೊಠಡಿಯಲ್ಲಿ ಮಗಳನ್ನ ಬಿಸಾಕಿ ಪರಾರಿಯಾಗಿದ್ದಾರೆ ಎಂದು ದಿವ್ಯಾ ಪೋಷಕರು ದೂರಿದ್ದಾರೆ.

ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿಯ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ಮೃತದೇಹವನ್ನ ರವಾನಿಸಲಾಗಿದೆ.

Edited By :
PublicNext

PublicNext

14/12/2021 08:24 pm

Cinque Terre

86.55 K

Cinque Terre

4