ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಲಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಚಾಲಕ

ಬಾಗಲಕೋಟೆ: ಕಬ್ಬು ಹೊತ್ತು ತಂದಿದ್ದ ಲಾರಿಗೆ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕೈಲಾಸ್ (23) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಚಾಲಕ.

ಈತ ಮಹಾರಾಷ್ಟ್ರ ಮೂಲದ ಬೀಡ್ ಜಿಲ್ಲೆಯ ಇವರಗಾಂವ್ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಬಾಗಲಕೋಟೆ ಜಿಲ್ಲೆಯ ಕುಳಗೇರಿ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಕುಳಗೇರಿ ಉಪ ಠಾಣೆಯ ಪೋಲಿಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಬ್ಬು ತುಂಬಿದ್ದ ಲಾರಿ ಚಲಾಯಿಸಿಕೊಂಡು ಕುಳಗೇರಿ ಸಮೀಪದ ಎಂ.ಆರ್.ಎನ್. ಶುಗರ್ ಕಾಖಾ೯ನೆಗೆ ತಂದಿದ್ದ ಲಾರಿ ಚಾಲಕ ಕೈಲಾಸ್ ಲಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Edited By : Manjunath H D
PublicNext

PublicNext

14/12/2021 12:40 pm

Cinque Terre

59.34 K

Cinque Terre

1

ಸಂಬಂಧಿತ ಸುದ್ದಿ