ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಯುವಕನನ್ನು ಹತ್ಯೆಗೈದ ಘಟನೆ ಚಿತ್ತಾಪುರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನಡೆದಿದೆ.
ಮಹಮ್ಮದ್ ರಶೀದ್ (26) ಕೊಲೆಯಾದ ಯುವಕ. ಪುಡಿರೌಡಿ ಲಂಗ್ಡಾ ಸಲೀಂ ಕೊಲೆಗೈದ ಆರೋಪಿ. ಲಂಗ್ಡಾ ಸಲೀಂ ಗಾಂಜಾ ಮಾರಾಟ ಮಾಡುತ್ತಿದ್ದ. ಸಲೀಂ ಬಳಿ ರಶೀದ್ ಗಾಂಜಾ ಖರೀದಿಗೆ ಹೋದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಹುಡುಗಿಯ ವಿಚಾರವಾಗಿ ಸಹ ಇಬ್ಬರ ನಡುವೆ ಗಲಾಟೆ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಚಿತ್ತಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
12/12/2021 03:34 pm