ವಿಜಯಪುರ: ಬಿಲ್ ಪಾವತಿಸುವಂತೆ ಮನೆಗೆ ತೆರಳಿದ್ದ ಲೈನ್‌ಮ್ಯಾನ್ ಮೇಲೆ ಗ್ರಾಹಕ ಹಲ್ಲೆಗೈದು, ಬಡಿಗೆ ತೋರಿಸಿ ಧಮ್ಕಿ ಹಾಕಿರುವ ಘಟನೆ ನಗರದ ಗ್ಯಾಂಗ್ ಬಾವಡಿಯಲ್ಲಿ ನಡೆದಿದೆ.
ಬಾಳಪ್ಪ ಮಲ್ಲಪ್ಪ ಬೊಮ್ಮಣಗಿ (31) ಹಲ್ಲೆಗೊಳಗಾದ ಲೈನ್‌ಮ್ಯಾನ್. ಇಲ್ಲಿನ ನೆಹರು ನಗರ ನಿವಾಸಿ ಮಹ್ಮದ್‌ರಫೀಕ್ ಬುಡನ್‌ಸಾಬ ಬಡೇಕಾರ (32) ಲೈನ್‌ಮ್ಯಾನ್ ಮೇಲೆ ಹಲ್ಲೆ ಮಾಡಿದಾತ.
ಬಾಕಿ ಉಳಿಸಿಕೊಂಡಿರುವ 2 ಸಾವಿರಕ್ಕೂ ಅಧಿಕ ವಿದ್ಯುತ್ ಬಿಲ್ ಪಾವತಿಸುವಂತೆ ಲೈನ್‌ಮ್ಯಾನ್ ಬಾಳಪ್ಪ ತಿಳಿಸಿದ್ದಾರೆ ಅದಕ್ಕೆ ರಫೀಕ್ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.ಕುಪಿತಗೊಂಡ ಆರೋಪಿ ಲೈನ್‌ಮ್ಯಾನ್ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾನೆ. ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
12/12/2021 12:40 pm