ಉತ್ತರಪ್ರದೇಶ : ಮಗುವನ್ನ ಕರೆದೊಯ್ಯುತ್ತಿದ್ದ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿರೋ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹಲ್ಲೆ ಮಾಡಿರೋ ದೃಶ್ಯ ವಿಡೀಯೋದಲ್ಲಿ ಸೆರೆಯಾಗಿದೆ..ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮಗುವನ್ನ ಕರೆದೊಯ್ಯುತ್ತಿದ್ದ. ಆದ್ರೆ ಮಗುವಿಗೂ ಈ ವ್ಯಕ್ತಿಗೂ ಏನೂ ಸಂಬಂಧವಿಲ್ಲ ಅಂತ ಲೋಕಲ್ ಪೊಲೀಸ್ ಸ್ಟೇಷನ್ ಇನ್ಸ್ ಪೆಕ್ಟರ್ ಮೊದಲು ವ್ಯಕ್ತಿಗೆ ಲಾಠಿಯಲ್ಲಿ ಹಿಗ್ಗಾಮುಗ್ಗ ಥಳಿಸಲು ಮುಂದಾದ್ರು. ಆಗ ಆ ವ್ಯಕ್ತಿ ದಯವಿಟ್ಟು ಮಗುವಿಗೆ ಏನೂ ಮಾಡಬೇಡಿ. ಮಗುವಿಗೂ ಹೊಡೆತ ಬೀಳ್ತಿದೆ ಅಂತ ಹೇಳಿ ಓಡಲು ಶುರು ಮಾಡಿದ.
ನಂತರ ಉಳಿದ ಪೊಲೀಸ್ ಸಿಬ್ಬಂದಿ ಮಗುವನ್ನು ಆತನ ಕೈಯಿಂದ ಬಿಡಿಸಲು ಮಗುವನ್ನ ಹಿಡಿದು ಎಳೆದಿದ್ದಾರೆ. ಮಗು ಜೋರಾಗಿ ಅತ್ತರೂ ಅದನ್ನ ನಿರ್ಲ್ಯಕ್ಷಿಸಿ ಅಮಾನವೀಯವಾಗಿ ಪೊಲೀಸರು ವರ್ತಿಸಿರೋದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆ ಸಿಬ್ಬಂದಿ ತಾಯಿಯಿಲ್ಲದ ಮಗುವಿದು ದಯವಿಟ್ಟು ಬಿಟ್ಟುಬಿಡಿ ಅಂತ ಕೂಗುತ್ತಿದ್ದ. ಆದ್ರೆ ಪೊಲೀಸರು ಮಗುವಿರೋದನ್ನ ಲೆಕ್ಕಿಸದೆ ಕ್ರೂರವಾಗಿ ನಡೆದುಕೊಂಡಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.
PublicNext
10/12/2021 04:21 pm