ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ರಾಜಕೀಯ ನಾಯಕನ 'ರಾಸಲೀಲೆ'- ವಿಡಿಯೋ ನೋಡಿಯೂ ಖಾಕಿ ಗಪ್‌ಚುಪ್

ಗದಗ: ಜಿಲ್ಲೆಯ ಕೆಲ ರಾಜಕೀಯ ನಾಯಕರು, ಜಿಲ್ಲಾ ಪೊಲೀಸರು ಇರುವ ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ರಾಜಕೀಯ ನಾಯಕನೋರ್ವ ಹರಿಬಿಟ್ಟ ತನ್ನದೇ ರಾಸಲೀಲೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಹೌದು. ಗದಗ-ಬೆಟಗೇರಿ ನಗರದ ಸಂಘವೊಂದರ ಅಧ್ಯಕ್ಷ ಪರಿಚಿತ ಮಹಿಳೆಯೊಂದಿಗೆ ನಡೆಸಿದ ತನ್ನದೇ ರಾಸಲೀಲೆಯ ವಿಡಿಯೊವೊಂದನ್ನು ಡಿಸೆಂಬರ್ 6ರಂದು ಮಧ್ಯಾಹ್ನ 2 ಗಂಟೆಗೆ ಹರಿಬಿಟ್ಟಿದ್ದಾನೆ. ಅದಾದ 20 ನಿಮಿಷಗಳ ನಂತರ ಅದನ್ನು ಡಿಲೀಟ್ ಮಾಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ಅದನ್ನು ಗ್ರೂಪ್‌ನ ಇತರ ಸದಸ್ಯರು ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ವಿಡಿಯೋ ಅವಳಿ ನಗರದಲ್ಲಿ ಸಾಕಷ್ಟು ವೈರಲ್ ಸಹ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿರುವ ವ್ಯಕ್ತಿಯು ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದ ಎನ್ನಲಾಗಿದೆ. ಗಣ್ಯಾತಿ ಗಣ್ಯರು ಇರುವ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಅಶ್ಲೀಲ ವಿಡಿಯೋ ಶೇರ್ ಆಗಿದೆ. ರಾಜಕಾರಣಿಗಳು, ಪೊಲೀಸರು ವಿಡಿಯೋ ನೋಡಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಇರುವುದಕ್ಕೆ ಜನ ಸಾಮಾನ್ಯರು ಅಸಮಾಧಾನ ಹೊರ ಹಾಕಿದ್ದಾರೆ.

Edited By : Nagesh Gaonkar
PublicNext

PublicNext

08/12/2021 10:10 pm

Cinque Terre

150.91 K

Cinque Terre

53