ಶಿಯಾ ವಕ್ಫ್ ಬೋರ್ಡ್ ಮಾಜಿ ಚೇರಮನ್ ವಸೀಂ ರಿಜ್ವಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಆದರೆ ಇದನ್ನ ವಿರೋಧಿಸಿರೋ ಕಾಂಗ್ರೆಸ್ ನಾಯಕರು ವಸೀಂ ರಿಜ್ವಿ ತಲೆ ಕಡಿದ ತಂದವರಿಗೆ ಲಕ್ಷ ಲಕ್ಷ ಬಹುಮಾನವನ್ನೂ ಘೋಷಿಸಿದ್ದಾರೆ. ಬನ್ನಿ ಹೇಳ್ತೀವಿ.
ವಸೀಂ ರಿಜ್ವಿ ವಿಭಿನ್ನ ವ್ಯಕ್ತಿತ್ವದ ವ್ಯಕ್ತಿ.ಕುರಾನ್‌ನಲ್ಲಿದ್ದ 26 ಆಯತ್‌ಗಳನ್ನೆ (ಸ್ಲೋಕಗಳು) ಬದಲಿಸಿ ಬಿಡಿ. ಇವುಗಳು ಭಯೋತ್ಪಾದನೆಗೆ ಪ್ರೇರಣೆ ಆಗುತ್ತಿವೆ ಅಂತಲೇ ವಸೀಂ ದೂರಿದ್ದರು.ಕೋರ್ಟ್ ಮೆಟ್ಟಿಲೂ ಏರಿದ್ದರು.ಆದರೆ ಅದರಿಂದ ಏನೂ ಪ್ರಯೋಜ ಆಗಲೇ ಇಲ್ಲ ಬಿಡಿ.
ಇಸ್ಲಾಮ್ ನಿಂದ ಹೊರ ಹಾಕಲ್ಪಟ್ಟ ವಸೀಂ ರಿಜ್ವಿ, ಈಗ ಹಿಂದೂ ಧರ್ಮಕ್ಕೆ ಮತಾಂತರ ಗೊಂಡಿದ್ದಾರೆ. ಇದನ್ನೆ ವಿರೋಧಿಸಿದ ಕಾಂಗ್ರೆಸ್ ನಾಯಕರಿಬ್ಬರು ವಸೀಂ ರಿಜ್ವಿ ಕೊಲೆಗೆ ಹೊಂಚು ಹಾಕಿದಂತಿದೆ. ವಸೀಂ ತಲೆ ಕಡಿದು ತಂದವರಿಗೆ 50 ಲಕ್ಷ ರೂಪಾಯಿ ಕೊಡೋದಾಗಿ ಘೋಷಿಸಿದ್ದಾರೆ. ಇನ್ನೊಬ್ಬ ಕಾಂಗ್ರೆಸ್ ನಾಯಕ 25 ಲಕ್ಷ ರೂಪಾಯಿ ಘೋಷಿಸಿ ಬಿಟ್ಟಿದ್ದಾರೆ.
PublicNext
08/12/2021 04:32 pm