ಮುಂಬೈ: ಪ್ರೀತಿ ಮಾಡೋದೇ ತಪ್ಪಾ ? ಪ್ರೀತಿಸಿ ಜೀವನ ಮಾಡೋದೇ ತಪ್ಪ ? ಮಹಾರಾಷ್ಟ್ರದ ಆ ಒಂದು ಕ್ರೂರ ಘಟನೆ ಈ ಪ್ರಶ್ನೆಗಳನ್ನ ಕೇಳುವಂತೆ ಮಾಡಿದೆ. ಯಾಕೆಂದ್ರೆ ಅಮ್ಮ-ಮಗ ಇಬ್ಬರೂ ಸೇರಿ ಗರ್ಭಿಣಿ ಯುವತಿಯ ತಲೆ ಕತ್ತರಿಸಿ ಸೆಲ್ಫಿ ತೆಗೆದುಕೊಂಡು ಕ್ರೂರತೆ ಮರೆದಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಈ ಘಟನೆ ನಿನ್ನೆ ಭಾನುವಾರ ನಡೆದಿದೆ. 19 ವರ್ಷದ ಕೀರ್ತಿ ಥೋರ್ ಅನ್ನೋ ಯುವತಿ ಕಳೆದ ಜೂನ್ ತಿಂಗಳಲ್ಲಿ ಪ್ರೀತಿಸಿದ ಹುಡುಗನ ಜೊತೆಗೆ ಓಡಿ ಹೋಗಿ ಮದುವೆ ಆಗಿದ್ದಳು.
ಆದರೆ, ನಿನ್ನ ನೋಡಬೇಕು ಅನಿಸುತ್ತಿದೆ ಅಂತಲೇ ಮಗಳಿಗೆ ಫೋನ್ ಕರೆ ಮಾಡಿದ್ದ ಅಮ್ಮ, ಉಪಾಯವಾಗಿಯೇ ಮಗಳಿರೋ ವಿಳಾಸ ತಿಳಿದುಕೊಂಡಿದ್ದಳು. ಅಲ್ಲಿಗೆ ಮಗನೊಂದಿಗೆ ಹೋಗಿ ಅಳಿಯನ್ನ ಒಂದು ಕೋಣೆಯಲ್ಲಿ ಹಾಕಿದ್ದಾಳೆ. ಅಡುಗೆ ಮನೆಯಲ್ಲಿ ಟೀ ಮಾಡುತ್ತಿದ್ದ ಮಗಳ ತಲೆಗೆ ಹೊಡೆಯಲಾಗಿದೆ. ಬಳಿಕ ಕೀರ್ತಿ ಸಹೋದರ ಕೊಡಲಿಯಿಂದ ತಲೆ ಕತ್ತರಿಸಿ ಹಾಕಿದ್ದಾನೆ.
ಪ್ರೀತಿ ಮಾಡಿದರೇ ಇದೇ ಸ್ಥಿತಿ ಆಗುತ್ತದೆ ಅಂತ ಹೇಳಲಿಕ್ಕೇನೆ ರುಂಡವಿಲ್ಲದೆ ಮುಂಡದ ಜೊತೆಗೆ ತಾಯಿ ಮತ್ತು ಗಮ ಸೆಲ್ಫಿ ತೆಗೆದುಕೊಂಡು ವಿಕೃತಿ ಮರೆದಿದ್ದಾರೆ. ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೀರ್ತಿ ಹತ್ಯೆ ಮಾಡಿರೋ ತಾಯಿ-ಮಗನನ್ನ ಪೊಲೀಸರು ಈಗ ಜೈಲಿಗಟ್ಟಿದ್ದಾರೆ.
PublicNext
06/12/2021 06:28 pm