ಬೆಂಗಳೂರು: ಮಗಳೊಂದಿಗೆ ಏಕಾಂತದಲ್ಲಿದ್ದ ಯುವನನ್ನು ಹೊಡೆದು ಕೊಲೆಗೈದ ತಂದೆಯನ್ನು ನಗರದ ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.
ನಾರಾಯಣ್ ಬಂಧಿತ ತಂದೆ. ನಿವೇಶ್ (19) ಕೊಲೆಯಾದ ಯುವಕ. ನಾರಾಯಣ ಮಗಳು ಹಾಗೂ ನಿವೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಗೆಳತಿಯ ಮನೆಯಲ್ಲಿ ಯಾರು ಇಲ್ಲದಿದ್ದಾಗ ನಿವೇಶ್ ಹೋಗಿ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದ. ಈ ವೇಳೆ ನಾರಾಯಣ್ ಮನೆಗೆ ಬಂದಿದ್ದು, ಮಗಳೊಂದಿಗೆ ನಿವೇಶ್ ಅಸಭ್ಯವಾಗಿ ಕಾಣಿಸಿಕೊಂಡಿದ್ದನ್ನು ನೋಡಿ ಕೋಪಗೊಂಡಿದ್ದಾರೆ. ತಕ್ಷಣವೇ ಕೈಗೆ ಸಿಕ್ಕ ಕಟ್ಟಿಗೆಯಿಂದ ನಿವೇಶ್ ತಲೆಗೆ ಹೊಡೆದಿದ್ದಾನೆ.
ತನ್ನ ಕೃತ್ಯದ ಬಳಿಕ ಗಾಬರಿಗೊಂಡ ನಾರಾಯಣ್ ಗಾಯಗೊಂಡಿದ್ದ ನಿವೇಶ್‌ನನ್ನು ಅಪರಚಿತ ಎಂದು ಡ್ರಾಮಾ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆ ಮಾಹಿತಿ ಆಧರಿಸಿ ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇತ್ತ ನಿವೇಶ್ ಕಾಣೆಯ ಬಗ್ಗೆ ವಿವಿ ಪುರಂ ಠಾಣೆಗೆ ನಿವೇಶ್ ಪೋಷಕರು ದೂರು ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ತೋರಿಸಿದಾಗ ನಿವೇಶ್ ಗುರುತು ಪತ್ತೆಯಾಗಿದೆ. ಬಳಿಕ ನಾರಾಯಣ್‌ನನ್ನು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಯಲಾಗಿದೆ. ಈ ಪ್ರಕರಣವನ್ನು ಕಲಾಸಿಪಾಳ್ಯದಿಂದ ವರ್ಗಾಯಿಸಿಕೊಂಡ ವಿವಿಪುರಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
PublicNext
05/12/2021 09:55 am