ಹೈದ್ರಬಾದ್:ಸಾಫ್ಟವೇರ್ ಇಂಜಿನಿಯರ್ ಫ್ಯಾಮಿಲಿಯೊಂದು ದುರಂತ ಅಂತ್ಯ ಕಂಡಿದೆ. ಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪತ್ನಿ ಮಕ್ಕಳ ಸಮೇತ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಈ ಸಾವಿಗೆ ಕಾರಣ ಆ ಒಂದು ಮನೆ. ಏನದು ಬನ್ನಿ, ಹೇಳ್ತೀವಿ.
ಆತ್ಮಹತ್ಯೆ ಮಾಡಿಕೊಂಡ ಸಾಫ್ಟವೇರ್ ಇಂಜಿನಿಯರ್ ಹೆಸರು ಚಂದ್ರಕಾಂತ್ ರಾವ್.ಮಗನ ಹೆಸರು ಪ್ರೀತಿಂ (9) ಮಗಳ ಹೆಸರು ಸರ್ವಜ್ಞ (ಒಂದೂವರೆ ವರ್ಷ) ಪತ್ನಿ ಹೆಸರು ಲಾವಣ್ಯ ಎಂದು ಗುರುತಿಸಲಾಗಿದೆ.
ಚಂದ್ರಕಾಂತ್ ರಾವ್ ಬಿಎಚ್‌ಇಎಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಸಾಲ ಮಾಡಿ ಬೈರಗೊಂಡದಲ್ಲಿ ಒಂದು ಅಪಾರ್ಟ್‌ಮೆಂಟ್ ಅನ್ನೂ ಖರೀದಿಸಿದ್ದರು.
ಇದರ ಸಾಲ ತೀರಿಸಲಾಗದೇ ಪರದಾಡುತ್ತಿದ್ದರು. ತಂದೆ ಹಣ ಕೊಡ್ತಾರೆ ಅಂತಲೂ ನಂಬಿದ್ದರು. ತಂದೆ ಯಾವುದೇ ರೀತಿ ಸಹಾಯ ಮಾಡದೇ ಇದ್ದಾಗಲೇ, ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಪತ್ನಿ ಲಾವಣ್ಯ ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
PublicNext
03/12/2021 04:05 pm