ಬೆಂಗಳೂರು: ಕಿರಿಕ್ ಕೀರ್ತಿಗೆ ಬಿಯರ್ ಬಾಟಲ್‌ನಿಂದ ಥಳಿಸಿದ ಘಟನೆ ನಗರದ ಹ್ಯಾಮರ್ಡ್ ಪಬ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕಿರಿಕ್ ಕೀರ್ತಿ ಕೂತಿದ್ದ ಪಕ್ಕದ ಟೇಬಲ್‌ನಲ್ಲಿ ಇದ್ದಾತ ಇವರ ಅಭಿಮಾನಿಯಾಗಿದ್ದ. ಸಹಜವಾಗಿಯೇ ಅಭಿಮಾನದಿಂದ ಪೊಟೋ ತೆಗೆದುಕೊಂಡಿದ್ದಾನೆ. ಇದಕ್ಕೆ ತುಂಬಾ ದರ್ಪದಿಂದಲೇ ಪೊಟೋ ಯಾಕೆ ಕ್ಲಿಕ್ಕಿಸಿದೆ ಎಂದು ಕಿರಿಕ್ ಕೀರ್ತಿ ರಂಪಾಟ ಮಾಡಿದ್ದಾರೆ. ಆ ವ್ಯಕ್ತಿ ಕ್ಷಮೆ ಕೇಳಿದ್ರೂ ಬಾಯಿಗೆ ಬಂದ ರೀತಿ ಮಾತನಾಡಿದ್ದಾರಂತೆ ಕೀರ್ತಿ. ಹೀಗಾಗಿ ಕೋಪಗೊಂಡ ವ್ಯಕ್ತಿ ಬಿಯರ್ ಬಾಲ್‌ನಿಂದ ಹಲ್ಲೆ ನಡೆಸಿದ್ದಾನೆ.
ತಲೆಗೆ ಬಿಯರ್ ಬಾಟಲ್‌ನಲ್ಲಿ ಹೊಡೆದ ವ್ಯಕ್ತಿಯ ವಿರುದ್ಧ ಸೆಕ್ಷನ್ 324 ಅಡಿ ಪ್ರಕರಣ ದಾಖಲಾಗಿದೆ ಹಾಗೂ ಹಲ್ಲೆ ನಡೆಸಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
03/12/2021 12:33 pm