ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಹೈಸ್ಕೂಲ್ ನಲ್ಲಿ ಪಾಠ ಮಾಡುತ್ತಿದ್ದ ಮಲ್ಲಪ್ಪ ತಳವಾರ ಎಂಬ ಶಿಕ್ಷಕ ವಿದ್ಯಾರ್ಥಿನಿಯರಿಗೆ ಕಿಸ್ ಕೊಡಿ ಎಂದು ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.
ಹೈಸ್ಕೂಲ್ ವಿದ್ಯಾರ್ಥಿನಿಗೆ ಆನ್ ಲೈನ್ ಕ್ಲಾಸ್ ಹೇಳುತ್ತಿದ್ದ ಶಿಕ್ಷಕ ಸುಮಾರು ಒಂದು ವರ್ಷದ ಹಿಂದೆ ನಂಬರ್ ಪಡೆದುಕೊಂಡು ಪೀಡಿಸುತ್ತಿದ್ದ. ಕಾಮುಕ ಶಿಕ್ಷಕ ಪ್ರತಿನಿತ್ಯ ಚಾಟ್ ಮಾಡುತ್ತ ಮಾತೆತ್ತಿದರೆ ಕಿಸ್ ಕೊಡು ಎಂದು ಸಂದೇಶ ಕಳುಹಿಸಿದ ಪೋಲಿ ಮಾಸ್ತರ್ ನ ಚಾಟಿಂಗ್ ಸ್ಕ್ರೀನ್ ಶಾರ್ಟ್ ಗಳು ವೈರಲ್ ಆಗಿದ್ದು ಸದ್ಯ ಕಾಮುಕ ಶಿಕ್ಷಕನನ್ನು ಬಂಧಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದ್ದಿದ್ದಾರೆ.
ಸದ್ಯ ಹೈಸ್ಕೂಲ್ ಶಾಲೆಯನ್ನು ಬಂದ್ ಮಾಡಿದ ಗ್ರಾಮಸ್ಥರು ಶಾಲೆಯ ಮುಂದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
PublicNext
01/12/2021 03:31 pm