ಬೆಂಗಳೂರು : ಅಟ್ಟಿಕಾ ಗೋಲ್ಡ್ ಶೋ ರೂಂ ನಿಂದ 2 ಕೋಟಿ 25 ಲಕ್ಷ ಮೌಲ್ಯದ 5593 ಕೆ.ಜಿ ಚಿನ್ನದ ಗಟ್ಟಿಗಳನ್ನ ಎಗರಿಸಿದ್ದ ಆರೋಪಿಗಳನ್ನು ಕೇಂದ್ರ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಹೌದು ನ.19 ರಂದು ಅಟ್ಟಿಕಾದಲ್ಲಿ ಸಿದ್ದೇಶ್ವರ ಸಿಂಗ್ ಚಿನ್ನಾಭರಣ ಖರೀದಿ ಮಾಡಿದ್ದ ಬಗ್ಗೆ ಅಟ್ಟಿಕಾ ಗೋಲ್ಡ್ ವಾಚ್ ಮೆನ್ ಖದೀಮರಿಗೆ ಮಾಹಿತಿ ನೀಡಿದ್ದ. ಇನ್ನು ವಾಚ್ ಮೆನ್ ಮಾಹಿತಿ ಆಧಾರ ಮೇಲೆ ಪಲ್ಸರ್ ಏರಿ ಬಂದ ಖದೀಮರು ಸಿದ್ದೇಶ್ವರ ಸಿಂಗ್ ಅವರನ್ನು ಅಡ್ಡಗಟ್ಟಿ ಚಿನ್ನ ದೋಚಿ ಪರಾರಿಯಾಗಿದ್ದರು.
ಸದ್ಯ ವಾಚ್ ಮೆನ್ ಸೇರಿ ಏಳು ಜನ ಆರೋಪಿಗಳನ್ನ ಬಂಧಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ವಶಪಡಿಸಿಕೊಂಡಿದ್ದಾರೆ. ಇನ್ನು ಡಿಸಿಪಿ ಅನುಚೇತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಇದಾಗಿದ್ದು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
PublicNext
01/12/2021 02:21 pm