ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಮಣ್ಣಿನಡಿ ಹೂತ್ತಿಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಬಿದರುತಳ ಬಳಿ ನಡೆದಿದೆ.
ಬಾಳೂರು ಗ್ರಾಮದ ನಾಗೇಶ್ ಆಚಾರ್ (46) ಮೃತ ದುರ್ದೈವಿ 5 ದಿನಗಳ ಹಿಂದೆ ನಾಗೇಶ್ ಅವರನ್ನು ಕೃಷ್ಣೇಗೌಡ ಎಂಬಾತ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದ. ನಂತರ ಕೊಲೆ ಮಾಡಿ, ಮಣ್ಣಿನಡಿ ಹೂತಿಟ್ಟು ಪೊಲೀಸರು ಹಾಗೂ ಸ್ಥಳೀಯರ ಜೊತೆ ಹುಡುಕಾಟದ ನಾಟಕವಾಡಿದ್ದಾನೆ ಎಂಬ ಆರೋಪ ಆತನ ಮೇಲಿದೆ.
ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಾಗೇಶ್‌ಗಾಗಿ ಹುಡುಕಾಟ ನಡೆಸುವಾಗ ಕೃಷ್ಣೇಗೌಡ, ಉದಯ್, ಪ್ರದೀಪ್‌ರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/12/2021 10:31 am