ಬೆಂಗಳೂರು: ಬಾರ್ ಮುಂದೆ ಕಬಾಬ್ ತೆಗೆದುಕೊಳ್ಳಲು ಹೋದ ಯುವಕನ ಮೇಲೆ ಪೋಕರಿ ಯುವಕರು ಕುಡಿದ ಮತ್ತಿನಲ್ಲಿ ಪುಂಡಾಟ ತೋರಿದ್ದಾರೆ. ಅಷ್ಟೇ ಅಲ್ಲ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಯವಕನಿಗೆ ಒಡೆದ ಬಿಯರ್ ಬಾಟಲ್‌ನಿಂದ ಬೆನ್ನಿಗೆ ಇರಿದಿದ್ದಾರೆ. ಈ ಎಲ್ಲ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ಪಲ್ಲವಿ ಬಾರ್ ಬಳಿ ಇದೇ 26ರಂದು ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅದೇ ಗ್ರಾಮದ ಆನಂದ್ (23) ಬಿಯರ್ ಬಾಟಲಿನಿಂದ ಇರಿತಕ್ಕೊಳಗಾದ ಯುವಕ. ನಂದಗುಡಿಯ ರೋಹನ್, ಮಧು, ಚಂದನ್ ಎಂಬ ಐದು ಜನ ಪುಂಡರ ಗ್ಯಾಂಗ್ ಈ ಕೃತ್ಯ ಎಸಗಿದೆ.
ಹಲ್ಲೆಗೊಳಗಾದ ಆನಂದ್‌ನನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
PublicNext
01/12/2021 07:46 am