ಕೊಚ್ಚಿ(ಕೇರಳ): ನವೆಂಬರ್ 1ರಂದು ಕೊಚ್ಚಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಮಾಡೆಲ್‌ಗಳು ಜೀವ ಬಿಟ್ಟಿದ್ದರು. ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಹಲವು ಅನುಮಾನಗಳು ಮೂಡಿದ್ದವು.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಆತ ಹಲವು ಟ್ವಿಸ್ಟ್ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ. ಹಾಗೂ ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಶಾಕಿಂಗ್ ವಿಡಿಯೋಗಳು ಸಿಕ್ಕಿವೆ. ಮಾಡೆಲ್ ಗಳಾದ ಅಟ್ಟಿಂಗಲ್ ಮೂಲದ ಮಿಸ್ ಕೇರಳ ವಿಜೇತೆ ಅನ್ಸಿ ಕಬೀರ್(25) ಹಾಗೂ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್(24) ಮತ್ತು ಕೆ. ಎ ಮಹಮ್ಮದ್ ಆಶಿಕ್ ಎಂಬಾತರು ಈ ಅಪಘಾತದಲ್ಲಿ ಮೃತಪಟ್ಟಿದ್ದರು. ಬದುಕಿಳಿದ ಚಾಲಕ ಅಬ್ದುಲ್ ರೆಹಮಾನ್ ಬಂಧಿತನಾಗಿ ಈಗ ಜಾಮೀನಿನ ಮೇಲೆ ಹೊರಬಂದಿದ್ದಾನೆ.
ಈಗ ಪೊಲೀಸರ ವಶದಲ್ಲಿರುವ ಆರೋಪಿ ಸೈಜು ಎಂಬಾತ ಅಪಘಾತ ನಡೆಯುವ ಮುನ್ನ ಖಾಸಗೀ ಹೊಟೇಲ್ ನಲ್ಲಿ ನಡೆದ ಪಾರ್ಟಿಯ ಆಯೋಜಕನಾಗಿದ್ದ. ಇದೇ ಪಾರ್ಟಿಯಲ್ಲಿ ಮಾಡೆಲ್ ಗಳು ಹಾಗೂ ಚಾಲಕ ಪಾಲ್ಗೊಂಡಿದ್ದರು. ಪಾರ್ಟಿ ಮುಗಿದ ಮೇಲೆ ತನ್ನ ಮನೆ ಅಥವಾ ಹೋಟೆಲ್ ನ ಕೋಣೆಯಲ್ಲಿ ಮಲಗುವಂತೆ ಆರೋಪಿ ಸೈಜು ಹೇಳಿದ್ದೆ. ಇದಕ್ಕೆ ನಿರಾಕರಿಸಿದ ಅವರು ಕಾರು ಹತ್ತಿ ಅಲ್ಲಿಂದ ಹೊರಟಿದ್ದಾರೆ. ಅವರು ಆ ವೇಳೆ ಮದ್ಯ ಸೇವಿಸಿದ್ದರು. ಹೀಗಾಗಿ ಅವರ ಸುರಕ್ಷತೆಗಾಗಿ ನನ್ನ ಕಾರಿನಿಂದ ನಾನು ಅವರ ಕಾರನ್ನು ಹಿಂಬಾಲಿಸಿದ್ದೆ ಎಂದು ಆರೋಪಿ ಸೈಜು ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾನೆ.
ಸದ್ಯ ಆರೋಪಿ ಸೈಜು ಮೊಬೈಲ್ ಫೋನಿನಲ್ಲಿ ಸಿಕ್ಕ ವಿಡಿಯೋ, ಕರೆ ದಾಖಲೆ ಮತ್ತು ಇತರ ಪುರಾವೆಗಳು ಬೆನ್ನು ಹತ್ತಿದ ಕೊಚ್ಚಿ ಪೊಲೀಸರು ತನಿಖೆಯಲ್ಲಿ ಮತ್ತಷ್ಟು ಆಳಕ್ಕೆ ಇಳಿದಿದ್ದಾರೆ.
PublicNext
30/11/2021 02:02 pm