ನೆಲಮಂಗಲ: ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಕಾರು ಕ್ಷಣಾರ್ಧದಲ್ಲೇ ಧಗಧಗನೇ ಹೊತ್ತಿ ಉರಿದು ಭಸ್ಮವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪೇಟೆಬೀದಿಯ ಹಿಪ್ಪೇ ಆಂಜನೇಯ ಬಡಾವಣೆಯಲ್ಲಿ ನಡೆದಿದೆ.
ನಗರ ನಿವಾಸಿ ಸಾಗರ್ ಎಂಬವರು ತಮ್ಮ ಮನೆ ಮುಂದೆ ಮಹೀಂದ್ರ ಎಕ್ಸ್ ಯುವಿ 500 ಮಾಡೆಲ್ ಕಾರನ್ನು ಪಾರ್ಕ್ ಮಾಡಿದ್ದು, ತಡರಾತ್ರಿ 1.30ರ ಸುಮಾರಿಗೆ ಯಾರೋ ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿಯೇ ಬೆಂಕಿ ಹಚ್ಚಿದ್ದಾರೆ.
ನಿನ್ನೆ ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ಮಹದೇಶ್ವರ ಬೆಟ್ಟಕ್ಕೆ ತೆರಳಲು ಸೊಂಡೆಕೊಪ್ಪ ಸಮೀಪದ ಮಲ್ಲಸಂದ್ರದ ತನ್ನ ಸ್ನೇಹಿತ ನಂದೀಶ್ ಅವರಿಂದ ಕಾರನ್ನು ಕೇಳಿ ಪಡೆದಿದ್ದು, ಮಹದೇಶ್ವರ ಬೆಟ್ಟದಲ್ಲಿ ಪೂಜೆ ಮುಗಿಸಿ ಕೊಂಡು ಮನೆ ಬಳಿ ಕಾರು ನಿಲ್ಲಿಸಲಾಗಿತ್ತು.
ಅಲ್ಲದೆ, ಕಾರಿನಲ್ಲಿ ಯಾವುದೇ ತಾಂತ್ರಿಕ ದೋಷವಿರಲಿಲ್ಲ. ಇದು ಯಾರೋ ದ್ವೇಷದಿಂದ ಬೇಕಂತಲೇ ಕಾರಿಗೆ ಬೆಂಕಿ ಹಚ್ಚಿರುವ ಶಂಕೆಯ ಮೇರೆಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
PublicNext
30/11/2021 12:30 pm