ಮೈಸೂರು: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.
ಪೊಲೀಸರ ವಶದಲ್ಲಿದ್ದಾಗ ಆರೋಪಿ ಸಿದ್ದರಾಜು (31) ಮೃತಪಟ್ಟಿದ್ದಾನೆ.ಸಂಬಂಧಿಕರು ಲಾಕಪ್ ಡೆತ್ ಆರೋಪ ಮಾಡುತ್ತಿದ್ದಾರೆ. ಸಿದ್ದರಾಜು ನಂಜನಗೂಡು ತಾಲೂಕಿನ ಬ್ಯಾಳಾರು ಹುಂಡಿ ನಿವಾಸಿಯಾದ ಈತ ಯುವತಿ ವಿಚಾರಕ್ಕೆ ಪಾನಮತ್ತನಾಗಿ ಗಲಾಟೆ ಮಾಡಿದ್ದ ಈತನನ್ನುಪೊಲೀಸ್ ಠಾಣೆಗೆ ಕರೆದು ತಂದಿದ್ದರು ಪೊಲೀಸರು.
ಲಾಕಪ್ ನಲ್ಲಿಯೇ ಪೊಲೀಸರ ವಶದಲ್ಲಿಂತಹ ಸಿದ್ದರಾಜು ಸಾವನ್ನಪ್ಪಿದ್ದಾನೆ.ಆಸ್ಪತ್ರೆಗೆ ದಾಖಲಿಸಲು ಮುಂದಾದ್ರೂ ಏನೂ ಪ್ರಯೋಜನವಾಗಿಲ್ಲ. ಘಟನಾ ಸ್ಥಳಕ್ಕೆ ಎಸ್ ಪಿ ಆರ್.ಚೇತನ್, ಎ ಎಸ್ ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
29/11/2021 04:08 pm