ಹುಣಸಗಿ: ಭತ್ತ ಕಟಾವು ಮಾಡುವ ಕ್ಲಾಸ್ ಮಷಿನ್ ಯಾರೋ ಕಿಡಿಗೇಡಿಗಳು ತಡರಾತ್ರಿ ಕಳ್ಳತನ ಮಾಡಿರೋ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಕುಪ್ಪಿ ಗ್ರಾಮದ ಸಿಮಾಂತರದಲ್ಲಿ ನಡೆದಿದೆ.
ಈ ಭತ್ತ ಕಟಾವು ಮಾಡುವ ಯಂತ್ರ ಹುಣಸಗಿ ತಾಂಡಾದ ರಾಜು ಎಂಬುವವರಿಗೆ ಸೇರಿದ್ದು, ತಡರಾತ್ರಿ ಕುಪ್ಪಿ ಗ್ರಾಮದ ಅಸುಪಾಸು ರೈತರ ಜಮೀನುಗಳಲ್ಲಿ ಭತ್ತ ಕಟಾವು ಮಾಡಿದ್ದು, ತಡರಾತ್ರಿ ರೈತನ ಜಮೀನೊಂದರಲ್ಲಿ ನಿಲ್ಲಿಸಲಾಗಿತ್ತು.
ಯಾರೋ ದುಷ್ಕರ್ಮಿಗಳು ಈ ಭತ್ತ ಕಟಾವು ಮಾಡೋ ಯಂತ್ರವನ್ನು ತಡರಾತ್ರಿ ಲಾರಿಯೊಂದರಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಈ ಘಟನೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
PublicNext
29/11/2021 10:48 am