ಬೆಂಗಳೂರು: ಐಟಿ ಬಿಟಿ ಉದ್ಯೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನ ಗುರಿಯಾಗಿಸಿಕೊಂಡು ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನ ಗೋಕುಲ್ ಹಾಗೂ ಜಿನುಜಾರ್ಜ್ ಎಂದು ಗುರುತಿಸಲಾಗಿದ್ದು ಇಬ್ಬರು ಕೇರಳ ಮೂಲದವರಾಗಿದ್ದು ಬಂಧಿತರಿಂದ 30 ಲಕ್ಷ ಬೆಲೆ ಬಾಳುವ ಎಂಡಿಎಂಎ,ಕ್ರಿಸ್ಟಲ್,ಹಾಗೂ ಚರಸ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಇನ್ನು ಆರೋಪಿಗಳು ನೈಜೀರಿಯಾ ಪ್ರಜೆಯಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ನಂತರ ಲಾಭಕ್ಕಾಗಿ ಈ ಕೃತ್ಯ ಎಸಗುತ್ತಿರುವುದಾಗಿ ಕಂಡು ಬಂದಿದೆ.
PublicNext
29/11/2021 09:42 am