ಬೆಂಗಳೂರು: ಎಸಿಬಿ ಪೊಲೀಸರು ದಾಳಿ ಮಾಡಿದಾಗ ತನಿಖೆಗೆ ಸರಿಯಾಗಿ ಸಹಕರಿಸದ ನಗರದ ಗ್ರಾಮೀಣ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ್‌ನನ್ನು ಭ್ರಷ್ಟಾಚಾರ ಆರೋಪದಡಿ ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಅಟ್ಟಲಾಗಿದೆ.
ವಾಸುದೇವ್ ವಿರುದ್ಧ ಆದಾಯಕ್ಕಿಂತ ಶೇ.203ರಷ್ಟು ಆಸ್ತಿ ಗಳಿಸಿರುವ ಆರೋಪ ಇದೆ. ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿ ಗಳಿಸಿರುವ ಬಗ್ಗೆ ತಿಳಿದು ಬಂದಿದೆ. ಮನೆಗಳನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ ಅವರು ನಗರದಾದ್ಯಂತ ಒಟ್ಟು 5 ಮನೆಗಳನ್ನು ನಿರ್ಮಾಣ ಮಾಡಿದ್ದರು ಎನ್ನಲಾಗಿದೆ. ಜೊತೆಗೆ ಕುಟುಂಬಸ್ಥರ ಹೆಸರಲ್ಲಿ ಒಟ್ಟು 28 ಮನೆಗಳು ಹೊಂದಿದ್ದಾನೆ ಎಂಬ ಆರೋಪವಿದೆ.
ಮಾಕಳಿಕುಪ್ಪೆ ಗ್ರಾಮದಲ್ಲಿ 1 ಎಕರೆ 38 ಗುಂಟೆ ಜಮೀನು, ಮಾಕಳಿ ಗ್ರಾಮದಲ್ಲಿ 2 ಎಕರೆ 8 ಗುಂಟೆ ಜಮೀನು 4 ಸೈಟ್‌ಗಳನ್ನು ವಾಸುದೇವ್ ಹೊಂದಿರುವುದು ಎಸಿಬಿ ದಾಳಿಯಲ್ಲಿ ಪತ್ತೆ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಹೊಸಕೆರೆಹಳ್ಳಿ ಬ್ಯಾರಮೌಂಟ್ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಹೊಂದಿರುವುದು ಪತ್ತೆ ಆಗಿದೆ.
ಸ್ಕೋಡಾ, ವೋಲ್ವೋ, ಬೆನ್ಜ್, ಟಾಟಾ ಕಂಪನಿಯ 5 ಐಷಾರಾಮಿ ಕಾರುಗಳು ಮತ್ತು 925.60 ಗ್ರಾಂ ಚಿನ್ನಾಭರಣ, 9 ಕೆ.ಜಿ ಬೆಳ್ಳಿ ಸಾಮಾನು 17.27 ಲಕ್ಷ ರೂ. ನಗದು, 1.31 ಕೋಟಿ ರೂ. ಬ್ಯಾಂಕ್ ಖಾತೆಯಲ್ಲಿ ಹಣ ಪತ್ತೆಯಾಗಿದೆ ಎಂದು ಮಾಹಿತಿ ಸಿಕ್ಕಿದೆ.
PublicNext
28/11/2021 12:03 pm