ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯೂರು ಗ್ರಾಮಾಂತರ ಪೊಲೀಸರಿಂದ ಕಳ್ಳನ ಬಂಧನ

ಹಿರಿಯೂರು : ತಾಲೂಕಿನ ಮೇಟಿಕುರ್ಕೆ ಗ್ರಾಮದ ಕೆ.ಎಂ. ಶಿವಕುಮಾರ್ ಅವರ ಮನೆಯಲ್ಲಿ ನವೆಂಬರ್ 12 ಹಾಗೂ 23 ರಂದು ಒಟ್ಟು 1,02,000 ರೂಪಾಯಿ ಕಳ್ಳತನ ಮಾಡಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಮೇಟಿಕುರ್ಕೆ ಬೋವಿ ಕಾಲೋನಿಯ ಬಸವರಾಜ (20) ವರ್ಷ ಎಂದು ಬಂಧಿಸಿ, ಆರೋಪಿಯಿಂದ 25,950 ರೂಗಳನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಯನ್ನು ಪತ್ತೆ ಹಚ್ಚಲು ಡಿವೈಎಸ್ಪಿ ರೋಷರ್ ಜಮೀರ್, ವೃತ್ತ ನಿರೀಕ್ಷಕ ಆನಂದ್ ನೇತೃತ್ವದಲ್ಲಿ ಪಿಎಸ್ಐ ಪರಮೇಶ್, ಹಾಗೂ ಶಶಿಕಲಾ ಮತ್ತು ಸಿಬ್ಬಂದಿಯ ಕಾರ್ಯವನ್ನು ಚಿತ್ರದುರ್ಗ ಅಧೀಕ್ಷಕರಾದ ಜಿ ರಾಧಿಕಾ ಶ್ಲಾಘಿಸಿರುತ್ತಾರೆ.

Edited By :
PublicNext

PublicNext

25/11/2021 06:46 pm

Cinque Terre

58.43 K

Cinque Terre

1