ಹಾಸನ : ನಟ ಪುನೀತ್ ರಾಜ್ ಕುಮಾರ ಸಾವಿನಿಂದ ಮನನೊಂದು ಖಿನ್ನತೆಗೆ ಜಾರಿದ್ದ ಅವರ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ. ಮೃತ ಅಭಿಮಾನಿಯನ್ನು ಮಯೂರ (34) ಹಾಸನದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಹಾ.ರಾ.ನಾಗರಾಜ್ ಅವರ ಪುತ್ರ ಈ ಮಯೂರ
ಪುನೀತ್ ರಾಜಕುಮಾರ ರನ್ನು ಹಲವು ಬಾರಿ ಭೇಟಿಯಾಗಿದ್ದ ಮಯೂರ ಅವರ ಸಾವಿನ ಬಳಿಕ ಆಘಾತಗೊಂಡು ಮಾನಸಿಕವಾಗಿನೊಂದಿದ್ದರು. ನಿತ್ಯ ಅಪ್ಪುವಿನ ಹತ್ತಾರು ಸ್ಟೇಟಸ್ ಹಾಕಿಕೊಂಡು ದುಖಃ ಹೊರಹಾಕುತ್ತಿದ್ದರು. ಆದ್ರೆ ನಿನ್ನೆ ಸಂಜೆ ಹಾಸನ ನಗರದ ರಾಜಕುಮಾರ ನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
25/11/2021 09:35 am