ಕೇರಳ:ಕಾನೂನು ಓದುತ್ತಿದ್ದ ವಿದ್ಯಾರ್ಥಿನಿ ವರದಕ್ಷಿಣೆ ಕಿರುಕುಳ ತಾಳಲಾರದೇ ಮದುವೆ ಆದ 7 ತಿಂಗಳಿಗೇನೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತಳನ್ನ 21 ವರ್ಷದ ಮೋಫಿಯಾ ಪರ್ವೀನ್ ಎಂದು ಗುರುತಿಸಲಾಗಿದೆ. ಮದುವೆ ಆದ ಬಳಿಕವೂ ಕಾನೂನು ಓದುತ್ತಿದ್ದಳು ಎಂದು ಹೇಳಲಾಗಿದ್ದು. ಅಲುವಾ ನಿವಾಸಿ ಪತಿ ಮತ್ತು ಅತ್ತೆಯಿಂದ ಈಕೆ ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದಳು ಎನ್ನಲಾಗಿದೆ.
ವರದಕ್ಷಿಣೆ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಸದ್ಯ ಅತ್ತೆ ಮತ್ತು ಗಂಡನನ್ನ ಪೊಲೀಸರು ಬಂಧಿಸಿದ್ದಾರೆ.
PublicNext
24/11/2021 10:03 pm