ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾಯಣ್ಣ ಮನೆ ಮೇಲೆ ಎಸಿಬಿ ದಾಳಿ, ಕೆಜಿ ಕೆಜಿ ಬಂಗಾರ,ದಾಖಲೆ ಪತ್ರ ವಶ

ಬೆಂಗಳೂರು: ಬಿಬಿಎಂಪಿಯ ರಸ್ತೆ ಅಭಿವೃದ್ದಿ ಮತ್ತು ಮೂಲಭೂತ ಸೌಕರ್ಯದ ಎಫ್​ಡಿಎ ನೌಕರ ಮಾಯಣ್ಣನ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ.ಮನೆಯಲ್ಲಿ ಎರಡು ಕೆ.ಜಿಗೂ ಹೆಚ್ಚು ಚಿನ್ನಾಭರಣ ಪತ್ತೆಯಾಗಿದ್ದು ಕೆಜಿ, ಕೆಜಿ ಚಿನ್ನದ ತೂಕವನ್ನ ತೂಗಲು ಅಕ್ಕಸಾಲಿಗನನ್ನ ಎಸಿಬಿ ಪೊಲೀಸರು ಕರೆಸಿದ್ದಾರೆ.

ಅನುಕಂಪದ ಆಧಾರದ ಮೇಲೆ ಅಪ್ಪನ ಕೆಲಸವನ್ನ ಮಾಯಣ್ಣ ಪಡೆದಿದ್ದರು. ಸಿಕ್ಕ ಸರ್ಕಾರಿ‌ ಕೆಲಸದಲ್ಲೇ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆಂಬ ಆರೋಪ ಇವರ ಮೇಲೆ ಇದ್ದು, ಡಿವೈಎಸ್ ಪಿ ಅಂಡ್ ಟೀಂ ಮನೆಯಲ್ಲಿ ಸಿಕ್ಕಿರೋ ದಾಖಲೆಗಳ ಮಾಹಿತಿ ಪಡೆಯುತ್ತಿದ್ದಾರೆ.

ಮಾಯಣ್ಣ ತಂಗಿ, ಬಾಮೈದ, ತಮ್ಮಂದಿರ ಮನೆ,ಕತ್ರಿಗುಪ್ಪೆ,ನಾಯಂಡಳ್ಳಿ,ವಿದ್ಯಾಪೀಠ ಸೇರಿ ಒಟ್ಟು ಎಂಟು ಕಡೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Edited By : Manjunath H D
PublicNext

PublicNext

24/11/2021 11:55 am

Cinque Terre

98.82 K

Cinque Terre

5

ಸಂಬಂಧಿತ ಸುದ್ದಿ