ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ಕಸಬಾ ಆರ್ ಐ ಲಕ್ಷ್ಮಿನರಸಿಂಹ ಮನೆ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕಳೆದ 15 ವರ್ಷಗಳಲ್ಲಿ ವಿಎ ನಂತರ ಆರ್ ಐ ಯಾಗಿ ದೊಡ್ಡಬಳ್ಳಾಪುರ ಕಸಬಾ ವ್ಯಾಪ್ತಿಯಲ್ಲಿ ಕೆಲಸ ಮಾಡಿರುವ ಲಕ್ಷ್ಮಿನರಸಿಂಹ, ಅಕ್ರಮ ಆಸ್ತಿ ಮಾಡಿರುವ ಆರೋಪ ಕೇಳಿಬಂದಿದೆ. ದೊಡ್ಡಬಳ್ಳಾಪುರ ನಗರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ, ಸೈಟ್ ಗಳು, ಹೆಸರಘಟ್ಟದಲ್ಲಿ ಆಸ್ತಿ ಮಾಡಿರುವ ಆರೋಪ ಇದೆ.
ಇಂದು ಬೆಳಗ್ಗೆ ದೊಡ್ಡಬಳ್ಳಾಪುರ ನಗರದ ಅರಳುಮಲ್ಲಿಗೆ ಬಾಗಿಲು ವೃತ್ತದಲ್ಲಿರುವ ಮನೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
PublicNext
24/11/2021 10:42 am