ಬೆಂಗಳೂರು: ಸ್ನಾನದ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಸಾವನ್ನಪ್ಪಿದ ಘಟನೆ
ಬೆಂಗಳೂರು ಉತ್ತರ ತಾಲೂಕು ನೆಲಮಂಗಲ ಉಪವಿಭಾಗದ ಮಾದನಾಯಕನ ಹಳ್ಳಿಯ ಶ್ರೀ ಅನ್ನಪೂರ್ಣೇಶ್ವರಿ ಲೇಔಟ್ ನಲ್ಲಿ ನಡೆದಿದೆ.
ಮೂಲತಃ ತುಮಕೂರು ಜಿಲ್ಲೆಯ ತುರುವೇಕರೆ ತಾಲೂಕು ಅರಕೆರೆ ಗ್ರಾಮದ ಕವಿತಾ (22) ಮೃತ ಪಟ್ಟವರು. ಕಳೆದ 4 ವರ್ಷಗಳಿಂದ ಪ್ರದೀಪ್ ಎಂಬಾತನೊಂದಿಗೆ ಅವರು ವೈವಾಹಿಕ ಜೀವನ ನಡೆಸುತ್ತಿದ್ದು,
3ರ ಹರೆಯದ ಹೆಣ್ಣು ಮಗುವಿದೆ.
ಆಗಾಗ ಪತಿ ಪ್ರದೀಪ್ ಮತ್ತು ಕವಿತಾ ಅವರ ಮಧ್ಯೆ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಸ್ನಾನಕ್ಕಾಗಿ ಹೋಗಿದ್ದ ಕವಿತಾ ಅಲ್ಲೇ ಸ್ಮೃತಿ ತಪ್ಪಿ ಕುಸಿದು ಬಿದ್ದಿದ್ದಾರೆ. ಎಷ್ಟೋತ್ತಾದ್ರೂ ಪತ್ನಿ ಹೊರಬರದ ಕಾರಣ ಅನುಮಾನಗೊಂಡ ಪತಿ ಕಿಟಕಿಯಿಂದ ನೋಡಿದಾಗ ಕವಿತಾ ನೆಲಕ್ಕೆ ಬಿದ್ದಿದ್ದರು. ಕೂಡಲೇ ಬಾಗಿಲು ಒಡೆದು ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಆಕೆ ಸಾವನ್ನಪ್ಪಿರೋದಾಗಿ ದೃಢ ಪಡಿಸಿದ್ದಾರೆ.
ಆದರೆ, ಕವಿತಾ ಪೋಷಕರು ಮಗಳ ಸಾವಿನ ಬಗ್ಗೆ ಶಂಕೆ ವ್ಯಕ್ತ ಪಡಿಸಿ, ಕೂಲಂಕಷವಾಗಿ ತನಿಖೆ ನಡೆಸಿ, ನ್ಯಾಯ ಕೊಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾದನಾಯಕನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
PublicNext
22/11/2021 07:37 pm