ಬೆಂಗಳೂರು: ರಾತ್ರೋರಾತ್ರಿ ಮನೆಯೊಂದಕ್ಕೆ ನುಗ್ಗಿದ ನಾಲ್ಕು ಜನರ ಗ್ಯಾಂಗ್ ಬಿಹಾರ ಮೂಲದ ದೀಪಕ್ ಕುಮಾರ್ (46) ಎನ್ನುವ ವ್ಯಕ್ತಿಯನ್ನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಗ್ಗೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಅಟ್ಟೂರು ವಾರ್ಡ್ ಶ್ರೀಗಂಧ ರಸ್ತೆಯಲ್ಲಿ ರಾಮಚಂದ್ರ ಎಂಬುವರ ಮನೆಯಲ್ಲಿ ಕಳೆದ ಒಂದು ವರ್ಷಗಳಿಂದ ದೀಪಕ್ ಲೀಸ್ ಪಡೆದು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಸಮೇತ ವಾಸವಾಗಿದ್ದರು. ಮೊದಲ ಮಗಳು ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ ಎರಡನೇ ಮಗಳು ನಾಲ್ಕನೇ ತರಗತಿ ಓದುತ್ತಿದ್ದಳು. ನಿನ್ನೆ ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿದ ಹಂತಕರು ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಕಾಲ್ಕಿತ್ತಿದ್ದಾರೆ
ಮಗಳ ಮೇಲೆಯೇ ಎಸಗುತ್ತಿದ್ದಾನ ಪೈಶಾಚಿಕ ಕೃತ್ಯ ?
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರಿಗೆ ದೀಪಕ್ ಹೇಳಿಕೊಳ್ಳುವಂತಹ ಯಾರೊಂದಿಗೂ ಹಳೆ ವೈಷ್ಯಮ ಹೊಂದಿರಲಿಲ್ಲ. ಪ್ರಾಥಮಿಕ ತನಿಖೆ ವೇಳೆ ಕಳೆದ ಒಂದೂವರೆ ವರ್ಷಗಳಿಂದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ತಾಯಿಯೊಂದಿಗೆ ಈ ವಿಚಾರ ತಿಳಿಸಿದ್ದಳು. ಈ ವಿಚಾರಕ್ಕಾಗಿಯೇ ಮನೆಯಲ್ಲಿ ದಂಪತಿ ನಡುವೆ ಕಲಹ ಏರ್ಪಟ್ಟಿತ್ತು. ಯುವತಿ ಸಹ ಕಾಲೇಜು ಸ್ನೇಹಿತರೊಂದಿಗೆ ಹೇಳಿ ಆಳಲು ತೋಡಿಕೊಂಡಿದ್ದಳಂತೆ. ನಿನ್ನೆ ಕುಡಿದ ಮತ್ತಿನಲ್ಲಿ ಮತ್ತೆ ಮಗಳ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದ ಎನ್ನಲಾಗಿದೆ. ಮಾಹಿತಿ ಅರಿದ ದುಷ್ಕರ್ಮಿಗಳು ದೀಪಕ್ ನನ್ನ ಕೊಲೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆರೋಪಿಗಳ ಬಂಧನ ಬಳಿಕ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ.
PublicNext
22/11/2021 04:43 pm