ಬೆಂಗಳೂರು: ಆಟೋ ಚಾಲಕನ ಮಗ ಬಿಸಿಎ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ಹಣ ಸುಲಿಗೆ ಮಾಡಿ ಮತ್ತಷ್ಟು ಹಣ ಹೊಡೆಯಲು ಪ್ಲ್ಯಾನ್ ಮಾಡಿದ್ದ ಖತರ್ನಾಕ ಗ್ಯಾಂಗ್ ಒಂದನ್ನ ಪಶ್ಚಿಮ ವಿಭಾಗದ ಅನ್ನಪೂರ್ಣೇಶ್ವರಿ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ
ರಿಯಲ್ ಎಸ್ಟೇಟ್ ಆಫೀಸ್ ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡಿಕೊಂಡಿದ್ದ ಅಭಿಷೇಕ್ ಶ್ರೀಮಂತ ಹುಡಗ ಎಂದುಕೊಂಡು ಆತನ ಕ್ಲಾಸ್ ಮೇಟ್ ವಿದ್ಯಾರ್ಥಿಗಳು ಅಭಿಷೇಕ್ ನನ್ನು ಕಿಡ್ನಾಪ್ ಮಾಡಲು BPO ನಲ್ಲಿ ಕೆಲಸ ಮಾಡುತ್ತಿದ್ದ ಪ್ರಜ್ವಲ್, ಅನಿಲ್ ಕುಮಾರ್ ,ದೀಪು ಇವರಿಗೆ ಮಾಹಿತಿ ನೀಡಿರುತ್ತಾರೆ.ದೀಪು ,ಅನಿಲ್ , ಪ್ರಜ್ವಲ್ ಹಾಗು ಒಬ್ಬ ಕ್ಯಾಬ್ ಡ್ರೈವರ್ ಸೇರಿ ಬಿಡಿಎ ಕಟ್ಟಡದ ಬಳಿ ಸಂಬಂದಿಯೊಬ್ಬರ ಕಾರು ತೆಗೆದುಕೊಂಡ ಬಂದ ವೇಳೆ ಕಿಡ್ನಾಪ್ ಮಾಡಿದ್ದರು.ನಂತ್ರ ತುಮಕೂರು ರಸ್ತೆ ಹಾಗು ಡಾಬಸ್ ಪೇಟೆ ಮೂಲಕ ದೇವನಹಳ್ಳಿಗೆ ಕರೆತಂದು ,ಸ್ಪಾಂಪ್ ಪೇಪರ್ ತೆಗೆದುಕೊಂಡು ಅಭಿಷೇಕ್ ಹತ್ತು ಲಕ್ಷ ಸಾಲ ಪಡೆದಿದ್ದ ಎನ್ನುವ ರೀತಿ ದಾಖಲಾತಿ ತಯಾರಿಸಿ ಅಭಿಷೇಕ್ ತಂದೆಗೆ ಕಾಲ್ ಮಾಡಿ ಮಾಹಿತಿ ನೀಡಿ 1 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಕೂಡ ಮಾಡಿದ್ದರು
ಅಭಿಷೇಕ್ ತಂದೆ ನೀಡಿದ 45 ಸಾವಿರ ಹಣ ಅಭಿಷೇಕ್ ಬಳಿ ಇದ್ದ 70 ಸಾವಿರ ಹಣ ಪಡೆದಿದ್ದ ಆರೋಪಿಗಳು ವಿಚಾರವನ್ನು ಯಾರಿಗೂ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದರು ಈ ಬಗ್ಗೆ ತಡವಾಗಿ ಅನ್ನಪೂರ್ಣೇಶ್ವರಿ ಠಾಣೆಗೆ ದೂರು ನೀಡಿದ ಮೇಲೆ ಪೋಲಿಸುರು ಐವರನ್ನು ಬಂಧಿಸಿದ್ದು ಒಬ್ಬ ಆರೋಪಿ ಪರಾರಿಯಾಗಿದ್ದಾನೆ
PublicNext
22/11/2021 04:20 pm