ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್​ಜಿ ಆಡುತ್ತಾ ಮೈಮರೆತ ವಿದ್ಯಾರ್ಥಿಗಳು, ರೈಲು ಹರಿದು ಇಬ್ಬರ ದಾರುಣ ಸಾವು!

ಲಕ್ನೋ: ರೈಲು ಹಳಿ ಮೇಲೆ ಕುಳಿತು ಪಬ್‌ಜಿ ಆಡುತ್ತಿದ್ದ ಇಬ್ಬರು ಬಾಲಕರ ಮೇಲೆ ರೈಲು ಹರಿದು ಅವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಥುರಾದ ಲಕ್ಷ್ಮೀನಗರದಲ್ಲಿ ಭಾನುವಾರ ನಡೆದಿದೆ.

ಕಪಿಲ್‌ (18) ಮತ್ತು ರಾಹುಲ್‌ (16) ಮೃತ ಬಾಲಕರು. ಮಥುರಾ ಕಂಟೋನ್ಮೆಂಟ್ ಹಾಗೂ ರಾಯಾ ರೈಲು ನಿಲ್ದಾಣಗಳ ಮಧ್ಯೆ ಈ ಘಟನೆ ಸಂಭವಿಸಿದೆ. ಕಪಿಲ್ ಹಾಗೂ ರಾಹುಲ್ ಇಬ್ಬರೂ 10ನೇ ತರಗತಿ ವಿದ್ಯಾರ್ಥಿಗಳಾಗಿದ್ದರು. ಘಟನಾ ಸ್ಥಳದಲ್ಲಿ ಎರಡು ಮೊಬೈಲ್‌ಗಳು ಸಿಕ್ಕಿವೆ. ಒಂದು ಹಾನಿಗೊಂಡಿದ್ದರೆ, ಇನ್ನೊಂದರಲ್ಲಿ ಪಬ್‌ಜಿ ಆಟ ಚಾಲೂ ಸ್ಥಿತಿಯಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಪಿಲ್ ಹಾಗೂ ರಾಹುಲ್ ಭಾನುವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ನಂತರ ಅಲ್ಲಿಯೇ ಕುಳಿತುಕೊಂಡು ಪಬ್‌ಜಿ ಆಡುತ್ತಾ ಮೈ ಮರೆತಿದ್ದರು. ಇದೇ ವೇಳೆ ರೈಲು ಹರಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

22/11/2021 12:49 pm

Cinque Terre

46.06 K

Cinque Terre

2

ಸಂಬಂಧಿತ ಸುದ್ದಿ