ಮಧ್ಯಪ್ರದೇಶ: ಕಾರ್ಮಿಕನೊಬ್ಬ ತನ್ನ ಬಾಕಿ ಇರೋ ವೇತನ ಕೇಳಿದ್ದಕ್ಕೆ ಆತನ ಕೈ ಕತ್ತರಿಸಿದ ದಾರುಣ ಘಟನೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಕಾರ್ಮಿಕ ಅಶೋಕ್ ಸಾಕೇತ್ ತನ್ನ ಬಾಕಿ ಇರೋ ವೇತನವನ್ನ ಕೇಳಿದ್ದಾನೆ. ಅದಕ್ಕೇನೆ ಓನರ್ ಗಣೇಶ್ ಮಿಶ್ರಾ ಸೇರಿದಂತೆ ಆತನ ಇಬ್ಬರು ಸಹೋದರರ ಜೊತೆಗೆ 45 ವರ್ಷದ ಅಶೋಕ್ ಸಾಕೇತ್ ವಾಗ್ವಾದವೂ ನಡೆದಿದೆ. ಆಗಲೇ ಮಿಶ್ರಾ ಸಹೋದರರು ಅಶೋಕ್ ಸಾಕೇತ್ ಕೈ ಕತ್ತರಿಸಿದ್ದಾರೆ. ಈ ಮೂವರನ್ನ ಈಗ ಪೊಲೀಸರು ಬಂಧಿಸಿದ್ದಾರೆ.
PublicNext
21/11/2021 04:34 pm