ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಂಟಿ ಮಹಿಳೆಗೆ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಗ್ಯಾಂಗ್ ಬಂಧನ

ಬೆಂಗಳೂರು: ಕೋವಿಡ್ ಎರಡನೆ ಅಲೆಯ ಸಮಯದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ರಾಬರಿ ಮತ್ತು ಮನೆಗಳ್ಳತನ ಮಾಡಿದ್ದ ಗ್ಯಾಂಗ್ ಅನ್ನು ಕೊಡಿಗೆಹಳ್ಳಿ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 25 ಲಕ್ಷ ಮೌಲ್ಯದ 650 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಸೈಮನ್, ಜೀವನ್, ಮೋಹನ್, ಸಲ್ಮಾನ್ ಟಿಪ್ಪು ಮತ್ತು ಪುನಿತ್ ಕುಮಾರ್ ಬಂಧಿತರಾಗಿದ್ದು ಕೊಡಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮೇ , ೨೬ ರಂದು ಟಿಆರ್ ಬಿಆರ್ ಲೇಔಟನ್ ಶಶಿಕಲಾ ಎಂಬುವರ ಮನೆಗೆ ನುಗ್ಗಿದ್ದ ಆರೋಪಿಗಳು ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ರು.ಜೂಜು ಹಾಗೂ ಮೋಜು ಮಸ್ತು ಮಾಡಲು ರಾಬರಿ ಮಾಡುತ್ತಿರುವುದಾಗಿ ತನಿಖೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ

ಸದ್ಯ ಬಂಧಿತ ಆರೋಪಿಗಳಿಂದ ಪಿಸ್ತೂಲ್ ವಶಪಡಿಸಿಕೊಂಡ ಪೊಲೀಸರು ಘಟನೆ ನಡೆದ ಒಂದು ತಿಂಗಳ ಬಳಿಕ ಮತ್ತೊಂದು ರಾಬರಿ ಮಾಡಲು ಹೊಂಚುಹಾಕುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬಂಧಿತರಿಂದ ಒಟ್ಟು 8 ಪ್ರಕರಣಗಳು ಬೆಳಕಿಗೆ ಬಂದಿವೆ.

Edited By : Manjunath H D
PublicNext

PublicNext

20/11/2021 04:21 pm

Cinque Terre

46.3 K

Cinque Terre

0

ಸಂಬಂಧಿತ ಸುದ್ದಿ