ಕರೂರು: ಆಕೆ ಇನ್ನು ಬಾಳಿ ಬದುಕಬೇಕಾದ ಬಾಲೆ ಆದರೆ ಆ ಕಿರಾತಕನ ಕೈಯಲ್ಲಿ ಸಿಕ್ಕು ನಲುಗಿದ ಮರುಕ್ಷಣ ಡೆತ್ ನೋಟ್ ಬರೆದಿಟ್ಟು ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡು ರಾಜ್ಯದ ಕರೂರಿನಲ್ಲಿ ನಡೆದಿದೆ.
ಹೌದು ಲೈಂಗಿಕ ಶೋಷಣೆಯಿಂದ ನೊಂದ 17 ವರ್ಷದ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೂ ಮೊದಲು ಬಾಲಕಿಯು ಡೆತ್ ನೋಟ್ ಬರೆದಿದ್ದಾಳೆ. “ಕರೂರ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು. ನನ್ನ ಈ ನಿರ್ಧಾರಕ್ಕೆ ಕಾರಣ ಯಾರು ಎಂದು ಹೇಳಲು ನನಗೆ ಭಯವಾಗಿದೆ. ನಾನು ಈ ಭೂಮಿಯಲ್ಲಿ ದೀರ್ಘಕಾಲ ಬದುಕಬೇಕು ಮತ್ತು ಇತರರಿಗೆ ಸಹಾಯ ಮಾಡಬೇಕೆಂದು ಬಯಸಿದ್ದೆ, ಆದರೆ ಈಗ ನಾನು ಇಷ್ಟು ಬೇಗ ಇಹಲೋಕ ತ್ಯಜಿಸುವಂತಾಗಿದೆ” ಎಂದು ಬರೆದಿದ್ದಾಳೆ.
ತಮಿಳುನಾಡು ರಾಜ್ಯದಲ್ಲಿ ಲೈಂಗಿಕ ಶೋಷಣೆಯ ಕಾರಣದಿಂದ ಇತ್ತೀಚೆಗೆ ನಡೆದ ಎರಡನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
PublicNext
20/11/2021 03:20 pm